Breaking News

ಪ್ರಮೋದ್ ಮುತಾಲಿಕ್ ಗೆ ಸಿಎಂ ಟಾಂಗ್

Spread the love

ವಿಜಯಪುರ; ; ರಾಜ್ಯದ ಇತಿಹಾಸದಲ್ಲಿ 5 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಸಾಲ ಮಾಡಿರುವ ಖ್ಯಾತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಜಯಪುರದ ಸೈನಿಕ್ ಸ್ಕೂಲ್ ಹೆಲಿಪ್ಯಾಡ್‍ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕಳೆದ ಬಜೆಟ್ ಘೋಷಣೆ ಗಳ ಪೈಕಿ ಕೇವಲ 10 ರಷ್ಟು ಕಾಮಗಾರಿಗಳು ಜಾರಿಯಾಗಿವೆ 3 ಲಕ್ಷ ಕೋಟಿ ಸಾಲ ಇದೆ ಎಂದಿರು. ಬಜೆಟ್ ನಲ್ಲಿ ಎಷ್ಟು ಅನುಷ್ಠಾನ ಗೊಂಡಿದೆ ಎಂದು ವಿಧಾನಸಭೆಯಲ್ಲಿ ವರದಿ ನೀಡುತ್ತೇವೆ ಎಂದರು.

ಆಂತರಿಕ ವಿಚಾರ
ಕಾಂಗ್ರೆಸ್ ಅವರ ಪ್ರಾಣಾಳಿಕೆ ಬಗ್ಗೆ ಪರಮೇಶ್ವರ್ ಅವರು ಅಸಮಾಧಾನ ಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅದು ಅವರ ಆಂತರಿಕ ವಿಚಾರ ಎಂದರು. ಪರಮೇಶ್ವರ್ ಅವರು ಬಹಳ ಬುದ್ದಿವಂತರು. ಎಲ್ಲವನ್ನೂ ಅರಿತವರು. ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅರ್ಥಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಪಕ್ಷದ ಶಾಸಕರನ್ನು ಭದ್ರ ಮಾಡಿಕೊಳ್ಳಲಿ
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪರ ಅಲೆ ಇದೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯ ಅವರು ಪ್ರವಾಸ ಮಾಡುತ್ತಿರುವ ಭಾಗದ ಶಾಸಕರನ್ನು ಗಟ್ಟಿಯಾಗಿ ಹಿಡಿದುಕೊಳ್ಳಲಿ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಭದ್ರ ಮಾಡಿಕೊಳ್ಳಲಿ. ಜವಾಬ್ದಾರಿಯುತ ಸ್ಥಾನ ದಲ್ಲಿರುವ ನಾನು ಇಷ್ಟೇ ಸಲಹೆ ನೀಡಲು ಸಾಧ್ಯ ಎಂದರು.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ