Breaking News

ಇವಿಎಂ ತಿರುಚಿದ್ದಾರೆಂದು ಆರೋಪಿಸಿ ಕುತ್ತಿಗೆ ಬಿಗಿದುಕೊಂಡು ಕಾಂಗ್ರೆಸ್​ ಅಭ್ಯರ್ಥಿಯಿಂದ ಹೈಡ್ರಾಮ!

Spread the love

ಅಹಮಾದಾಬಾದ್​: ಇವಿಎಂ ತಿರುಚಿದ್ದಾರೆ ಎಂದು ಆರೋಪಿಸಿ ಗುಜರಾತಿನ ಕಾಂಗ್ರೆಸ್​ ಅಭ್ಯರ್ಥಿಯೊಬ್ಬ ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಪ್ರತಿಭಟಿಸಿದ್ದಾರೆ. ಮತಎಣಿಕೆಯ ಮಧ್ಯೆಯೇ ಈ ಹೈಡ್ರಾಮ ಸೃಷ್ಟಿಸುವ ಮೂಲಕ ಕೆಲ ಕಾಲ ಮತಎಣಿಕೆ ಕೇಂದ್ರದಲ್ಲಿ ಗೊಂದಲದ ವಾತವರಣವನ್ನು ನಿರ್ಮಿಸಿದರು.

 

ಗಾಂಧಿಧಾಮ್​ ಅಭ್ಯರ್ಥಿ ವೆಲ್ಜಿಭಾಯ್​ ಸೊಲಂಕಿ ಎಂಬುವರಿಂದ ಈ ಹೈಡ್ರಾಮ ನಡೆದಿದೆ. ಬಿಜೆಪಿ ಅಭ್ಯರ್ಥಿ ಮಾಲ್ತಿ ಕಿಶೋರ್​ ಮಹೇಶ್ವರಿ ಎದುರು 12 ಸಾವಿರ ಮತಗಳ ಅಂತರದಲ್ಲಿ ಸೋಲಂಕಿ ಅವರು ಹಿನ್ನಡೆ ಅನುಭವಿಸಿದ್ದಾರೆ. ಕೆಲವೊಂದು ಇವಿಎಂಗಳನ್ನು ಸರಿಯಾಗಿ ಸೀಲ್​ ಮಾಡಿರಲಿಲ್ಲ ಎಂದು ಸೋಲಂಕಿ ಆರೋಪ ಮಾಡಿದ್ದಾರೆ.

ತುಂಬಾ ಅಸಮಾಧಾನಗೊಂಡಂತೆ ಕಾಣುವ ಸೋಲಂಕಿ, ಇವಿಎಂ ತಿರುಚಲಾಗಿದೆ ಎಂದು ಆರೋಪಿಸಿ, ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಧರಣಿ ಮಾಡಿದರು. ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದರೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪ ಮಾಡಿದರು. ಸೋಲಂಕಿ ಅವರ ಪ್ರತಿಭಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ