Breaking News

ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ವೃದ್ಧೆಯ ಮೇಲೆ ಜೇನು ದಾಳಿ

Spread the love

ಭತ್ತದ ಕಟಾವಿಗೆ ಗದ್ದೆಗೆ ಹೋಗಿದ್ದ ವೃದ್ಧ ರೈತ ಮಹಿಳೆ ಓರ್ವರಿಗೆ ಜೇನು ಹುಳು ಕಚ್ಚಿರುವ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ನಡೆದಿದೆ.

ಯಳ್ಳೂರ ಗ್ರಾಮದ 70 ವರ್ಷದ ಚಾಂಗುನಾ ಕೃಷ್ಣಾ ಕುಗಜಿ ಜೇನು ದಾಳಿಯಿಂದ ಗಾಯಗೊಂಡಿರುವ ವೃದ್ಧ ರೈತ ಮಹಿಳೆ. ತಮ್ಮ ಹೊಲದಲ್ಲಿ ಭತ್ತದ ಕಟಾವು ಮಾಡಲು ಬಂದಿದ್ದ ವೇಳೆ ಏಕಾಏಕಿ ಜೇನುಗಳು ದಾಳಿ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ವೃದ್ಧೆಯ ಮುಖ, ಬಾಯಿ ಮತ್ತು ತುಟಿಗಳಿಗೆ ಜೇನು ಕಚ್ಚಿವೆ. ಅದೇ ರೀತಿ ಇನ್ನಿಬ್ಬರು ಮಹಿಳೆಯರಿಗೂ ಕೂಡ ಜೇನು ಹುಳು ಕಚ್ಚಿವೆ. ಬಳಿಕ ಅಲ್ಲಿಯೇ ಇದ್ದ ರೈತ ಮುಖಂಡ ರಾಜು ಮರವೆ ಗಾಯಾಳುಗಳನ್ನು ಕರೆದುಕೊಂಡು ಯಳ್ಳೂರ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ