Breaking News

ಕಾಂಗ್ರೆಸ್‌ ಮಾಜಿ ಶಾಸಕ ಎನ್‌ಟಿ ಬೊಮ್ಮಣ್ಣ ನಿಧನ; ಗಣ್ಯರ ಸಂತಾಪ

Spread the love

ಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕ ಎನ್ ಟಿ ಬೊಮ್ಮಣ್ಣ ನಿಧನರಾಗಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಎನ್ ಟಿ ಬೊಮ್ಮಣ್ಣ ಒಂದು ತಿಂಗಳ ಹಿಂದೆ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಎನ್‌ಟಿ ಬೊಮ್ಮಣ್ಣ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದರು.

ಎನ್​.ಟಿ ಬೊಮ್ಮಣ್ಣ 1985 ರಿಂದ 1994 ರವರೆಗೆ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. 2018 ರ ಜೆಡಿಎಸ್ ಅಭ್ಯರ್ಥಿಯಾಗಿ, ಎನ್. ವೈ ಗೋಪಾಲಕೃಷ್ಣ ಅವರ ವಿರುದ್ಧ ಪರಾಭವಗೊಂಡರು. 60 ರ ದಶಕದಲ್ಲಿ ರಾಜಕೀಯಕ್ಕೆ ಧುಮುಕಿದ್ದ ಅವರು, ತಾಲೂಕು ಬೋರ್ಡ್ ಅಧ್ಯಕ್ಷರಾಗಿ ನಂತರ ಶಾಸಕರಾಗಿದ್ದರು. ನಾಳ ಕೂಡ್ಲಿಗಿ ತಾಲೂಕಿನ ಸ್ವಗ್ರಾಮದಲ್ಲಿ ನರಸಿಂಹ ಗಿರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


Spread the love

About Laxminews 24x7

Check Also

ಅಮೇರಿಕಾರದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ಕುಟುಂಬಕ್ಕೆ 260 ಕೋಟಿ ಪರಿಹಾರ!

Spread the loveಸಿಯಾಟಲ್: ಅಮೆರಿಕದ ಸಿಯಾಟಲ್‌ನಲ್ಲಿ ವೇಗವಾಗಿ ಬಂದ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ