Breaking News

ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಅಭಯ್ ಪಾಟೀಲ್ ಗರಂ

Spread the love

ಬೆಳಗಾವಿ ನಗರದಲ್ಲಿ ರೈಲ್ವೇ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ನಾಲ್ಕು ವರ್ಷಗಳನ್ನು ತೆಗೆದಿಕೊಂಡ ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಅಭಯ್ ಪಾಟೀಲ್ ಗರಂ ಆಗಿದ್ದಾರೆ. ನೀವು ಕಾಮಗಾರಿಯನ್ನು ವಿಳಂಬ ಮಾಡಿದ್ದರಿಂದ ಜನ ನಮ್ಮನ್ನು ಬಯ್ಯುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿ ನಗರದಲ್ಲಿ ಟಿಳಕವಾಡಿಯ ಮೂರನೇ ರೈಲ್ವೇ ಗೇಟ್‌ಬಳಿಯ ರೈಲ್ವೇ ಮೇಲ್ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಭಯ್ ಪಾಟೀಲ್ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬರಂಗವಾಗಿಯೇ ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಪ್ತಪಡಿಸಿದರು. ಬೆಳಗಾವಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಸುರೇಶ ಅಂಗಡಿಯವರು. ಉತ್ತರ ಕರ್ನಾಟಕದಲ್ಲಿ ರೈಲ್ವೆ ಯೋಜನೆ ಬಂದಿರುವುದು ಸುರೇಶ್ ಅಂಗಡಿ ಅವರಿಂದ.

ಕಳೆದ ನಾಲ್ಕು ವರ್ಷದಿಂದ ಈ ಕಾಮಗಾರಿ ವಿಳಂಬ ಆಗ್ತಿದೆ. ಮೇಲ್ಸೇತುವೆ ನಿರ್ಮಾಣ ಮಾಡಲು ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದೀರಿ. ಇದರಿಂದ ಜನರು ನಮಗೆ ಬೈಯುವಂತಾಗಿದೆ. ನೀವು ಎಷ್ಟು ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟಿದ್ದೀರಿ..? ನಿಮ್ಮ ಅರೆಬರೆ ಕಾಮಗಾರಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಮಳೆಯಿಂದಾಗಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ.

ಆದ್ರು ನಿರ್ಲಕ್ಷ್ಯ ತೊರಿಸಲಾಗುತ್ತಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಂದು ಸರಿಯಾಗಿ ಮೈಕ್ ವ್ಯವಸ್ಥೆ ಮಾಡುವ ಯೋಗ್ಯತೆ ಇಲ್ಲ ನಿಮಗೆ ನೀವು ಬೆಂಗಳೂರು, ನಿಮ್ಮ ಕಚೇರಿಯಲ್ಲಿ ಕುಳಿತು ಯೋಜನೆ ರೂಪಿಸಬೇಡಿ ನಿಮ್ಮ ಕೆಲಸಗಳು ಜನರಿಗೆ ಅನುಕೂಲ ಆಗಬೇಕಿದೆ. ಅದನ್ನ ಬಿಟ್ಟು ಜನರಿಗೆ ತೊಂದರೆ ಆಗಬಾರದು ಎಂದು ಗರ್‌ಂ ಆದ್ರು.


Spread the love

About Laxminews 24x7

Check Also

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಶಾಸಕ ಅಭಯ ಪಾಟೀಲ್ ಗೆ ಸುಪ್ರೀಂ ಕೋರ್ಟ್ ನೋಟಿಸ್

Spread the loveದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ