Breaking News

BIGGNEWS : ನಾನು ಮನಸ್ಸು ಮಾಡಿದ್ರೆ, ಬಿಜೆಪಿ ಕಾರ್ಯಕ್ರಮ ಫ್ಲೆಕ್ಸ್‌ ಎಲ್ಲೂ ಹಾಕೋದಕ್ಕೆ ಬಿಡಲ್ಲ : ಡಿಕೆಶಿ

Spread the love

ಬೆಂಗಳೂರು : ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ‌ ಯಾತ್ರೆ ಫ್ಲೆಕ್ಸ್‌ ಹಾಕಿದ್ದನ್ನು ಹರಿದು ಹಾಕಿದ ವಿಚಾರ ತಿಳಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಫ್ಲೆಕ್ಸ್‌ ಹರಿದು ಹಾಕುವುದು ಒಳ್ಳೆಯ ಸಂಸ್ಕೃತಿಯಲ್ಲ. ಚುಚ್ಚಿದರು ಗುಂಡುಕ್ಕಿದರೂ ಕಾಂಗ್ರೆಸ್ಸಿಗರು ಹೆದರಲ್ಲ. ನಾನು ಮನಸ್ಸು ಮಾಡಿದ್ರೆ ಅವರು ಎಲ್ಲೂ ಕಾರ್ಯಕ್ರಮ ಪ್ಲೇಕ್ಸ್‌ ಹಾಕೋದಕ್ಕೆ ಆಗಲ್ಲ. ಸಿಎಂ ಮತ್ತು ಅವರ ಕಾರ್ಯಕರ್ತರಿಗೆ ಡಿಕೆಶಿ ಎಚ್ಚರಿಕೆ ನೀಡಿದ್ದರು.

ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡಿರುವ ಭಾರತ್ ಜೋಡೋ‌ ಯಾತ್ರೆ ಸೆ.30 ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಪಕ್ಷದ ವತಿಯಿಂದ ಹಾಕಲಾಗಿದ್ದ ನಾಯಕರ ಫ್ಲೆಕ್ಸ್​ಗಳನ್ನು ಇಂದು ಬೆಳಗಿನಜಾವ ದುಷ್ಕರ್ಮಿಗಳು ಹರಿದುಹಾಕಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ