Breaking News

ಕಾಂಗ್ರೆಸ್ ನ ನಾಗೇಂದ್ರ ಸೇರಿದಂತೆ ನಾಲ್ಕು ಶಾಸಕರು ಬಿಜೆಪಿಗೆ: ಸೋಮಶೇಖರ ರೆಡ್ಡಿ ಹೊಸ ಬಾಂಬ್

Spread the love

ಳ್ಳಾರಿ: ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮೂರು -ನಾಲ್ಕು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ಬಳ್ಳಾರಿ ನಗರ ಬಿಜೆಪಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಷ್ಟೇ ಸಿನಿಮಾ ಶುರುವಾಗಿದ್ದು, ಮುಂದೆ ಯಾರು ಎಲ್ಲಿ ಹೋಗುತ್ತಾರೆ ಎಂಬುದು ತಿಳಿಯಲಿದೆ.

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರು ಹೋಗಲ್ಲವೆಂದು ತಿಳಿಸಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋಗಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ವಲಸೆ ಹೋಗುವುದರ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಗೆ ಮೊದಲೇ ನಾಗೇಂದ್ರ ಅವರೇ ಬಿಜೆಪಿ ಸೇರಲಿದ್ದಾರೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.


Spread the love

About Laxminews 24x7

Check Also

ಸಿಎಂ ಕುರ್ಚಿ ಉಳಿಯಬೇಕಿದೆ, ಅದಕ್ಕೆ AICC ಗೆ ಸಾವಿರ ಸಾವಿರ ಕೋಟಿ ಹೋಗ್ತಿದೆ; ಆರ್‌. ಅಶೋಕ್‌

Spread the loveಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್‌  ಪಕ್ಷಕ್ಕೆ ಕರ್ನಾಟಕವೇ ಆರ್‌ಬಿಐ ಆಗಿದೆ. ಮುಖ್ಯಮಂತ್ರಿಗಳು ಸ್ಥಾನ ಉಳಿಸಿಕೊಳ್ಳಬೇಕಿದೆ. ಹಾಗಾಗಿ ಸಾವಿರ ಸಾವಿರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ