Breaking News

40% ಕಮಿಷನ್ ವಿರುದ್ಧ ‘ಪೇ ಸಿಎಂ’ ಅಭಿಯಾನ ಆರಂಭಿಸಿದ ಕಾಂಗ್ರೆಸ್‌

Spread the love

ಬೆಂಗಳೂರು : ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್ ಈಗ ” ಪೇಸಿಎಂ” ಎಂಬ ವಿಶಿಷ್ಟ ಅಭಿಯಾನ ಆರಂಭಿಸಿದೆ.

ರಾಜಧಾನಿ ಬೆಂಗಳೂರಿನ ಆಯಕಟ್ಟಿ‌ನ ಸ್ಥಳಗಳಲ್ಲಿ “ಪೇಸಿಎಂ” ಪೋಸ್ಟರ್ ಅಂಟಿಸಲಾಗಿದೆ.

ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಈ ಅಭಿಯಾನ ತೀವ್ರಗೊಳಿಸಲಾಗಿದೆ.

ಕ್ಯೂ ಆರ್ ಕೋಡ್ ಇರುವ ಪೇಟಿಎಂ ಮಾದರಿ ಸ್ಟಿಕರ್ ನ್ನು ಪೇಸಿಎಂ ಎಂದು ಬದಲಾಯಿಸಿ ಇಲ್ಲಿ 40% ಕಮಿಷನ್ ಸ್ವೀಕರಿಸಲಾಗುವುದು ಎಂದು ವ್ಯಂಗ್ಯವಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಡೆಸುತ್ತಿರುವ ಈ ಅಭಿಯಾನ ಸಿಎಂ ಬೊಮ್ಮಾಯಿ ಅವರನ್ನು ಕೆರಳಿಸಿದ್ದು, ಗುಪ್ತದಳದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ