Breaking News

ಮಹಿಳಾ ಪೇದೆ ಹತ್ಯೆ ಕೇಸ್​; ಒಬ್ಬನಿಗಾಗಿ ಇಬ್ಬರ ಫೈಟ್-ಲೇಡಿ ಕಾನ್ಸ್​​ಟೇಬಲ್ ಸ್ಫೋಟಕ ಲವ್ ಕಹಾನಿ..

Spread the love

ತುಮಕೂರು: ಕರ್ತವ್ಯಕ್ಕೆ ತೆರಳಿದ್ದ ಮಹಿಳಾ ಪೊಲೀಸ್ ಪೇದೆ ನಾಪತ್ತೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಪ್ರಕಣರದ ವಿಚಾರಣೆ ಮುಂದುವರೆಸಿರುವ ಪೊಲೀಸರು, ಮತ್ತೊಬ್ಬ ಮಹಿಳಾ ಕಾನ್ಸ್​ಟೇಬಲ್​ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. 

ಏನಿದು ಪ್ರಕರಣ..?
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಪೊಲೀಸ್ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಸುಧಾ (39) ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ನಾಪತ್ತೆ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ನಾಪತ್ತೆಯಾಗಿದ್ದ ಸುಧಾ ಅವರ ಮೃತದೇಹ ಪತ್ತೆಯಾಗಿತ್ತು. ಸುಧಾರನ್ನು ಕೊಲೆ ಮಾಡಿದ್ದ ಆಕೆಯ ಚಿಕ್ಕಪ್ಪನ ಮಗ (ಸಹೋದರ) ಮಂಜುನಾಥ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದ. ಈ ವೇಳೆ ದೊರೆತ ಡೆತ್​​ ನೋಟ್ ಆಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ಒಬ್ಬನಿಗಾಗಿ ಇಬ್ಬರ ಫೈಟ್..
ಹೌದು, ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಸುಧಾ ಕೊಲೆಯಲ್ಲಿ ಹುಳಿಯಾರ್ ಪೊಲೀಸ್ ಠಾಣೆಯಲ್ಲಿಯೇ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿದ್ದ ರಾಣಿ ಪಾತ್ರ ಇರುವುದರ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಮೃತ ಸುಧಾ ಹಾಗೂ ರಾಣಿ ಇಬ್ಬರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರೋ ಪೊಲೀಸ್​​ ಒಬ್ಬರನ್ನು ಪ್ರೀತಿ ಮಾಡುತ್ತಿದ್ದರಂತೆ. ಇದೇ ವಿಚಾರವಾಗಿ ಇಬ್ಬರು ಪೊಲೀಸ್ ಠಾಣೆಯಲ್ಲೇ ಕಳೆದ ಆರೇಳು ತಿಂಗಳಿಂದ ಗಲಾಟೆ ಮಾಡಿಕೊಂಡಿದ್ದರಂತೆ.

ಈ ಹಂತದಲ್ಲಿ ತನ್ನ ಪ್ರಿಯಕರ ತನಗೆ ಸಿಗಬೇಕಾದ್ರೆ ಸುಧಾಳನ್ನು ಮುಗಿಸಬೇಕು ಅಂತ ರಾಣಿ ನಿರ್ಧಾರ ಮಾಡಿದ್ದಳಂತೆ. ಇದರಂತೆ ಸುಧಾ ಚಿಕ್ಕಪ್ಪನ ಮಗ ಮಂಜುನಾಥ್ ಹಾಗೂ ಆತನ ಸ್ನೇಹಿತ ನಿಖೇಶ್ ಎಂಬಾತನಿಗೆ ಆರೋಪಿ ರಾಣಿ 5 ಲಕ್ಷ ರೂಪಾಯಿಗೆ ಸುಫಾರಿ ನೀಡಿದ್ದಳಂತೆ. ಹೇಗಾದರೂ ಸುಧಾಳನ್ನ ಮುಗಿಸಲೇಬೇಕು ಎಂದು ರಾಣಿ ಸೂಚನೆ ನೀಡಿದ್ದರಿಂದ ಇದೇ ತಿಂಗಳ 4 ರಂದು ಶಿವಮೊಗ್ಗದಲ್ಲಿ ಓದುತ್ತಿದ್ದ ಸುಧಾ ಮಗನನ್ನ ನೋಡಿಕೊಂಡು ಬರೋ ನೆಪದಲ್ಲಿ ಕೊಲೆ ಸ್ಕೆಚ್​ ಹಾಕಿದ್ದರಂತೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ