Breaking News

ಗಣೇಶ್ ಚತುರ್ಥಿ ನಿಮಿತ್ತ ಅನ್ನ ಸಂತರ್ಪಣೆ ಮಾಡಿದ ಸಾಯನ್ನವರ ದಂಪತಿಗಳು

Spread the love

 

ಗೋಕಾಕ:ನಾಡಿನೆಲ್ಲೆಡೆ ಗಣೇಶನ ಅಬ್ಬರ ಜೋರಾಗಿದೆ ಸುಮಾರು ಎರಡು ವರ್ಷ ಕೊವಿಡ ಮಹಾಮಾರಿಯ ಕಾರಣ ಎಲ್ಲೆಡೆ ಗಣೇಶ್ ಉತ್ಸವ ಅಷ್ಟೊಂದು ಅದ್ದೂರಿಯಾಗಿ ನಡೆದಿರಲಿಲ್ಲ ಇನ್ನು ಇತ್ತಿಚ್ಚ್ಚಿಗೆ ಎಲ್ಲೆಡೆ ಸಂಭ್ರಮಕ್ಕೆ ಪರವಾನಿಗೆ ಸಿಕ್ಕಿದ್ದಕ್ಕೆ ಎಲ್ಲರೂ ಗಣೇಶ್ ನ ಆಗಮನ ವನ್ನಾ ಜೋರಾಗಿ ಅದ್ದುರಿಯಾಗಿ ಮಾಡಿಕೊಂಡಿದ್ದಾರೆ

 

ಅದೇರೀತಿ ಗೋಕಾಕ ನಗರದ ಎಪಿಎಂಸಿ ಮಾಜಿ ನಿರ್ದೇಶಕರು ಶ್ರೀ ಬಸವರಾಜ ಸಾಯನ್ನವರ ದಂಪತಿಗಳು ಮಹಾಲಿಂಗೇಶ್ವರ ನಗರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಹಮ್ಮಿ ಕೊಂಡಿದ್ದಾರೆ
ಗಣೇಶ್ ನ ಆಗಮನ ಆಗಿ ಐದು ದಿನಗಳು ಕಳೆದವು ಎಲ್ಲಾಕಡೆ ಗಣೇಶನ ವಿಸರ್ಜನೆಯ ಸಂಭ್ರಮ ಇಂದಿನಿಂದ ಎಲ್ಲಾಕಡೆ ಜೋರಾಗಿ ನಡೆಯುತ್ತೆ .

ಅದರ ಪ್ರಯುಕ್ತ ದಂಪತಿಗಳು ಸುಮಾರು ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಒಂದು ಅನ್ನ ಸಂತರ್ಪಣೆ ಕಾರ್ಯಕ್ರಮ ದಲ್ಲಿ ನಗರದ ಹಾಗೂ ಸುತ್ತಮುತ್ತಲಿನ ಜನ ಪಾಲ್ಗೊಂಡು ಶ್ರೀ ಗಣೇಶನ ಪ್ರಸಾದದ ಲಾಭವನ್ನು ಪಡೆದು ಕೊಂಡಿದ್ದಾರೆ.

 

ಇನ್ನು ಅನ್ನಸಂತರ್ಪಣೆ ಜೊತೆ ಜೊತೆಗೆ ಜನರ ಹಿತಕ್ಕಾಗಿ ವಿಶೇಷ ಪೂಜೆ ಅನ್ನದಾನ ಮಾಡಿದ್ದೇವೆ ಆ ಭಗವಂತ ಎಲ್ಲರಿಗೂ ಒಳ್ಳೆಯ ಆಯುಷ್ಯ ಆರೋಗ್ಯ ಅಭಿವೃದ್ದಿ ಕೊಟ್ಟುಕಾಪಾಡಲಿ ಎಂದು ವಾರ್ಡ್ ನಂ :20 ಮಹಾಲಿಂಗೇಶ್ವರ ನಗರ ಹಾಲಿ ಸದ್ಯಸರು ಶ್ರೀಮತಿ ವನಶ್ರೀ ಬಸವರಾಜ ಸಾಯನ್ನವ ಅವರು ಹಾರೈಸಿದರು.

 

ಅನ್ನ ಸಂತರ್ಪಣೆ ಪ್ರಸಾದ ಸ್ವೀಕರಿಸಿದ ಜನರು ಕೂಡ ಸಾಯನ್ನವರ ದಂಪತಿಗೆ ಶುಭ ಕೋರಿದರು

ಇನ್ನು ಈ ಒಂದ್ ಸಂದರ್ಭದಲ್ಲಿ ಬಸವರಾಜ ಸಾಯನ್ನವರ ಹಾಗೂ ಅವರ್ ಪತ್ನಿ ಹಾಗೂ ಅವರ್ ಅಭಿಮಾನಿ ಬಳಗ ಹಾಗೂ ಯುವಕರ ತಂಡ ಉಪಸ್ಥಿತಿ ರಿದ್ದರೂ


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ