Breaking News

ಹೈಕೋರ್ಟ್‌ನ ಬೆಂಗಳೂರು , ಧಾರವಾಡ, ಕಲಬುರಗಿ ಪೀಠಗಳಿಗೆ 5 ದಿನ ರಜೆ

Spread the love

ಬೆಂಗಳೂರು: ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಆಗಸ್ಟ್‌ 29ರಂದು ರಜೆ ಘೋಷಿಸಲಾಗಿದೆ.

ಈ ಕುರಿತು ಹೈಕೋರ್ಟ್‌ ಪ್ರಭಾರಿ ರಿಜಿಸ್ಟ್ರಾರ್‌ ಜನರಲ್‌ ಬಿ. ಮುರಳೀಧರ ಪೈ ಅಧಿಸೂಚನೆ ಹೊರಡಿಸಿದ್ದಾರೆ.

 

ಆ.29ರ ರಜೆಯ ಬದಲಿಗೆ ಅಕ್ಟೋಬರ್‌ 15ರಂದು ಕೆಲಸದ ದಿನ ಎಂದು ಘೋಷಿಸಲಾಗಿದ್ದು, ಬೆಂಗಳೂರು ಪ್ರಧಾನ ಪೀಠ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಅಕ್ಟೋಬರ್‌ 15ರಂದು ಕಲಾಪ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಆ. 27 ಮತ್ತು 28 ಕ್ರಮವಾಗಿ ಶನಿವಾರ ಮತ್ತು ರವಿವಾರ ಹೈಕೋರ್ಟ್‌ನ ರಜಾ ದಿನಗಳು. ಆ.30ರಂದು ಸ್ವರ್ಣಗೌರಿ ವ್ರತ ನಿಮಿತ್ತ ಹೈಕೋರ್ಟ್‌ ಬೆಂಗಳೂರು ಪ್ರಧಾನಪೀಠ, ಧಾರವಾಡ-ಕಲಬುರಗಿ ಪೀಠಗಳಿಗೆ ರಜೆ ನೀಡಲಾಗಿದೆ. ಆ.31ರಂದು ವರಸಿದ್ಧಿ ವಿನಾಯಕ ವ್ರತ ರಜೆ ಇದೆ. ಆ.29ರಂದು ರಜೆ ಘೋಷಿಸಲಾಗಿರುವುದರಿಂದ ಸೆ.1ರಂದು ಕೋರ್ಟ್‌ ಕಲಾಪಗಳು ಪುನರಾರಂಭವಾಗಲಿವೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ