Breaking News

ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದ ಮಠಾಧೀಶ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು

Spread the love

ಧಾರವಾಡ : ತಮ್ಮ 89 ವರ್ಷಗಳ ಸುದೀರ್ಘ ಸನ್ಯಾಸದ ಬದುಕಿಗೆ ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದೇ ತಮ್ಮೊಳಗಿನ ತಪೋಬಲದಿಂದ ಸದಾಕಾಲವೂ ಭಕ್ತರ ಒಳಿತನ್ನೇ ಬಯಸಿರುವ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು ಓರ್ವ ಆದರ್ಶ ಮಠಾಧೀಶರೆನಿಸಿದ್ದಾರೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ಅವರು ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ 89ನೆಯ ವರ್ಧಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ ಜಾಗೃತಿಗೆ ಮತ್ತು ಸಂಸ್ಕೃತಿ-ಸಂಸ್ಕಾರದ ಉಳಿವಿಗಾಗಿ ಶ್ರೀಗಳವರು ನಿರಂತರ ಶ್ರಮಿಸಿದ್ದಾರೆ ಎಂದರು.

ಅಧ್ಯಕ್ಷತೆವಹಿಸಿದ್ದ ನವಲಗುಂದ ತಾಲೂಕು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆಧ್ಯಾತ್ಮಿಕ ಶಿಕ್ಷಣವು ಬದುಕಿನಿಂದ ಬಿಡುಗಡೆ ಹೊಂದಲು ಆತ್ಮಜ್ಞಾನದ ಕಲೆಯನ್ನು ಬೋಧಿಸುತ್ತದೆ. ಭಕ್ತ ಸಂಕುಲದಲ್ಲಿ ಆಧ್ಯಾತ್ಮದ ಶಿಕ್ಷಣವು ಅಧಿಕಗೊಳ್ಳಲು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶಕ್ತಿಮೀರಿ ಶ್ರಮಿಸಿದ್ದಾರೆ ಎಂದರು.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ