Breaking News

ಧಾರವಾಡ : ಟಂಟಂ ವಾಹನ ತೊಳೆಯಲು ಹೋದ ತಂದೆ-ಮಗ ನೀರುಪಾಲು

Spread the love

ಧಾರವಾಡ: ಟಂಟಂ ವಾಹನವನ್ನು ತೊಳೆಯಲೆಂದು ಕೆರೆಗೆ ಇಳಿದಿದ್ದ ತಂದೆ-ಮಗ ಇಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕ್ಯಾರಕೊಪ್ಪ ಗ್ರಾಮದ ಗದಿಗೆಪ್ಪ ಅಂಗಡಿ (ತಂದೆ) ಹಾಗೂ ರವಿ ಅಂಗಡಿ (ಮಗ) ಸಾವಿಗೀಡಾದ ದುರ್ದೈವಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಇವರಿಬ್ಬರೂ ಇಂದು ಬೆಳಿಗ್ಗೆ ಟಂಟಂ ವಾಹನ ತೊಳೆಯಲೆಂದು ಗ್ರಾಮದ ಹೊರವಲಯ ನವೋದಯ ಶಾಲೆಯ ಪಕ್ಕದ ಕರೆಗೆ ಇಳಿದಾಗ ಕಾಲು ಜಾರಿ ಕರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಂದೆ ಗದಿಗೆಪ್ಪನ ಶವ ದೊರೆತಿದ್ದು, ರವಿಯ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ