Breaking News

ಬಕ್ರೀದ್ ನಿಮಿತ್ಯ ಬೆಳಗಾವಿ ನಗರದ ಏರಿಯಾಗಳಲ್ಲಿ ಪೊಲೀಸರಿಂದ ಪಥಸಂಚಲನ

Spread the love

ನಾಳೆ ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಏರಿಯಾದಲ್ಲಿ ಬೆಳಗಾವಿ ನಗರ ಪೊಲೀಸರು ಪಥಸಂಚಲನವನ್ನು ನಡೆಸಿ ಜಾಗೃತಿಯನ್ನು ಮೂಡಿಸಿದರು.

ಹೌದು ನಾಳೆ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ ರಾಜ್ಯ ಸರಕಾರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ. ಹಾಗಾಗಿ ಬೆಳಗಾವಿ ನಗರದಲ್ಲಿಯೂ ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಬೆಳಗಾವಿ ನಗರ ಪೊಲೀಸರು ನಗರದ ಸೂಕ್ಷ್ಮ ಹಾಗೂ ಸತೀಸೂಕ್ಷ್ಮ ಏರಿಯಾಗಳಲ್ಲಿ ಪಥಸಂಚಲನವನ್ನು ನಡೆಸಿದರು.

ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಕಂಜರ್ ಗಲ್ಲಿ, ಖಡಕ್ ಗಲ್ಲಿ, ಜಾಲಗಾರ ಗಲ್ಲಿ, ಚವ್ಹಾಟ್‌ಗಲ್ಲಿ ಮೊದಲಾದ ಏರಿಯಾಗಳಲ್ಲಿ ಸಂಚಾರ ಮಾಡಿ ಸಾರ್ವಜನಿಕರಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಿದರು


Spread the love

About Laxminews 24x7

Check Also

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಶಾಸಕ ಅಭಯ ಪಾಟೀಲ್ ಗೆ ಸುಪ್ರೀಂ ಕೋರ್ಟ್ ನೋಟಿಸ್

Spread the loveದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ