Breaking News

ಬೆಂಗಳೂರಿಗರೇ ಎಚ್ಚರ.. ನಿಮ್ಮ ಮನೆಗೂ ಬರಬಹುದು ಇಂಥಾ ಒಂದು ಖತರ್ನಾಕ್ ನೇಪಾಳಿ ಗ್ಯಾಂಗ್..!

Spread the love

ಬೆಂಗಳೂರು: ವೃದ್ಧೆಯ ಕೈ ಕಾಲು ಕಟ್ಟಿ ದರೋಡೆ ಮಾಡಿದ್ದ ನೇಪಾಳಿ ದಂಪತಿ ಸೇರಿ ಮೂವರನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಪ್ರತಾಪ್ ಸಿಂಗ್ ಅಲಿಯಾಸ್ ಪ್ರೇಮ ಬಹದ್ದೂರ್, ಸಂಗೀತಾ ಅಲಿಯಾಸ್ ಸೋನು ದಂಪತಿ ಹಾಗೂ ಸಹಚರ ಬಿಷ್ಣು ಬಹದ್ದೂರ್ ಬಂಧಿತರು.‌ ನೇಪಾಳ ಮೂಲದ ದಂಪತಿಗಳು ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು.

ನೇಪಾಳ ಮೂಲದ ವ್ಯಕ್ತಿಯನ್ನೇ ಸಂಪರ್ಕ ಮಾಡಿಕೊಂಡು ಜೆ.ಬಿ ನಗರ ಠಾಣಾ ವ್ಯಾಪ್ತಿಯ ನಿವಾಸಿ ವಿನೋದ್ ಎಂಬುವರ ಮನೆಯ ಸೆಕ್ಯೂರಿಟಿ ಗಾರ್ಡ್​ಗಳಾಗಿ ದಂಪತಿಗಳು ಕೆಲಸಕ್ಕೆ ಸೇರಿಕೊಂಡಿದ್ದರು. ಹೀಗೆ ಕೆಲಸ ಮಾಡಿಕೊಂಡಿದ್ದವರು.

ಚಿನ್ನಾಭರಣ ಹಾಗೂ ಹಣದ ಬಗ್ಗೆ ಮಾಹಿತಿ ಕಲೆ ಹಾಕಿ, ದರೋಡೆಗೆ ಪಕ್ಕಾ ಪ್ಲಾನ್ ಹಾಕಿಕೊಂಡಿದ್ದರು. ಸರಿಯಾದ ಟೈಮ್​ ಎಂದು ಪ್ಲಾನ್ ಮಾಡಿಕೊಂಡಿದ್ದ ದಂಪತಿಗಳು, ಮನೆಯಲ್ಲಿ ಯಾರು ಇಲ್ಲದ ವೇಳೆ, ಮನೆಯ ಮಾಲೀಕ ವಿನೋದ್​ನ ತಾಯಿಗೆ ಹಗ್ಗದಿಂದ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆಯಿಟ್ಟು ಮನೆಯಲಿದ್ದ 10 ಲಕ್ಷ ನಗದು, 150 ಗ್ರಾಂ ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಆನೇಕಲ್ ಬಳಿ ಮೂವರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಯಾವುದೇ ದಾಖಲೆಗಳಿಲ್ಲದೇ ಭಾರತಕ್ಕೆ ಬಂದಿರುವುದು ಗೊತ್ತಾಗಿದೆ. ಇವರ ಹಿಂದೆ ಬೇರೆ ಗ್ಯಾಂಗ್ ಕೂಡ ಇರುವ ಶಂಕೆ ಮೂಡಿದ್ದು, ತನಿಖೆ ಮುಂದುವರೆದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ