Breaking News

ವೇಶ್ಯಾವಾಟಿಕೆಯ ಮಹಿಳೆಗೆ ಊರು ಬಿಟ್ಟು ಹೋಗುವಂತೆ ಗದರಿದ ಎಸ್​ಪಿ..

Spread the love

ಕೊಪ್ಪಳ: ವೇಶ್ಯಾವಾಟಿಕೆ ನಡೆಸಿ ಸಿಕ್ಕಿಬಿದ್ದಿದ್ದ ಮಹಿಳೆಯೊಬ್ಬರಿಗೆ ಎಸ್​ಪಿಯೊಬ್ಬರು ಊರು ಬಿಟ್ಟು ಹೋಗುವಂತೆ ಗದರಿದ್ದು, ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದ್ದು ಹಲವರ ಗಮನ ಸೆಳೆದಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಎಚ್ಚರಿಕೆ ನೀಡಿದ್ದಾರೆ.

 

ಆರೋಪಿಗಳ ಪರೇಡ್ ವೇಳೆ ತಪ್ಪಿತಸ್ಥರ ವಿಚಾರಣೆ ನಡೆಸಿದ ಎಸ್​ಪಿ ಅರುಣಾಂಶು ಗಿರಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಒಂದಕ್ಕಿಂತ ಹೆಚ್ಚು ಸಲ ವೇಶ್ಯಾವಾಟಿಕೆ ಅಪರಾಧದಲ್ಲಿ ಸಿಕ್ಕಿಬಿದ್ದಿದ್ದರಿಂದ ಆಕೆಗೆ ಅವರು ಹೀಗೆ ಗದರಿದ್ದಾರೆ.

ಎಷ್ಟು ಜನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದೀಯಾ? ನಿನಗೆ ಹೆಣ್ಣು ಮಕ್ಕಳಿಲ್ವಾ? ನಿನ್ನ ಮಗಳಿಗೂ ಇದೇ ರೀತಿ ದಾರಿ ಮಾಡಿಕೊಡ್ತಿಯಾ? ಎಂದು ಗದರಿದ ಎಸ್​ಪಿ, ಆಕೆ 50 ವರ್ಷ ವಯಸ್ಸಾಗಿದ್ದರೂ ಇಂಥ ಚಟುವಟಿಕೆಯಲ್ಲಿ ತೊಡಗಿದ್ದನ್ನು ತಿಳಿದು, ಊರು ಬಿಟ್ಟು ಹೋಗಿ ಎಂದು ಕಳಿಸಿಕೊಟ್ಟಿದ್ದಾರೆ. ಅದೇ ರೀತಿ ರೌಡಿಶೀಟರ್​ ಹಾಗೂ ಗಡಿಪಾರಾದವರಿಗೂ ಎಸ್​ಪಿ ಕ್ಲಾಸ್ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ.

Spread the love ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ. ವಿದೇಶ ಪ್ರವಾಸದಲ್ಲಿರುವ ಜನನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ