Breaking News

ಪ್ರಿಯಕರನ ಜೊತೆ ಲವ್ವಿಡವ್ವಿ: ಬೆಡ್ ರೂಮಿನಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಕ್ಕೆ ಪತಿಯ ಕೊಲೆ

Spread the love

 

ಪ್ರಿಯತಮನ ಜೊತೆ ಲವ್ವಿಡವ್ವಿ ಮಾಡುವಾಗ ಮಹಿಳೆಯೊಬ್ಬಳು ತನ್ನ ಪತಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಬೆಡ್‍ರೂಮಿನಲ್ಲಿ ಸಿಕ್ಕಿಬಿದ್ದ ಘಟನೆ ತುಮಕೂರಿನ ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ನಡೆದಿದೆ.ವಿದ್ಯಾ ಪತಿಯನ್ನೇ ಕೊಲೆ ಮಾಡಿದ ಪತ್ನಿ. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಗೆ ಪಡ್ಡೆ ಹುಡುಗರ ಹುಚ್ಚು ಜೋರಾಗಿತ್ತು ಎನ್ನಲಾಗಿದೆ.

ಪತಿ ಇಲ್ಲದ ಸಮಯ ನೋಡಿ ವಿದ್ಯಾ ಯುವಕ ಸತೀಶ್ ಅಲಿಯಾಸ್ ಜಾಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಕೆಲಸಕ್ಕೆಂದು ಮುಂಬೈಗೆ ಹೋದಾಗ ಇವರಿಬ್ಬರು ಜೊತೆಯಲ್ಲಿ ಇರುತ್ತಿದ್ದರು. ಭಾನುವಾರ ಮಧ್ಯರಾತ್ರಿ ಪತಿ ಏಕಾಏಕಿಯಾಗಿ ಮನೆಗೆ ಹಿಂದಿರುಗಿದ್ದು,

ಈ ವೇಳೆ ಇಬ್ಬರು ಪ್ರಣಯಪಕ್ಷಿಗಳು ಬೆಡ್ ರೂಮಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತುಮಕೂರು ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಇತ್ತ ಸತೀಶ್ ಇದೇ ಶಿರಾ ಗೇಟ್‍ನ ಪಂಚನಾಥ ರಾಯರ ಪಾಳ್ಯದವನು. ಆಟೋ ಓಡಿಸಿಕೊಂಡಿದ್ದ ಸತೀಶ್‍ನಿಗೆ ಬ್ಯೂಟಿಪಾರ್ಲರ್ ನಡೆಸುವ ಆಂಟಿ ವಿದ್ಯಾ ಪರಿಚಯವಾಗುತ್ತಾಳೆ. ಅಲ್ಲಿಂದ ಇಬ್ಬರ ಕಳ್ಳಾಟ ಶುರುವಾಗುತ್ತದೆ.

ವಿದ್ಯಾಳ ಪತಿ ಹನುಮೇಗೌಡ ಹೋಟೆಲ್ ಉದ್ಯಮ ನಡೆಸುತ್ತಾರೆ. ಮುಂಬೈನಲ್ಲೂ ಉದ್ಯಮ ಇರುವುದರಿಂದ ಅಲ್ಲಿಗೆ ಹೋಗಿ ಭಾನುವಾರ ಹಿಂದಿರುಗಿದ್ದರು. ಈ ವೇಳೆ ವಿದ್ಯಾ ಹಾಗೂ ಸತೀಶ್ ಜೊತೆಯಲ್ಲಿ ಇರೋದನ್ನು ಕಂಡ ಹನುಮೇಗೌಡ ಕೆಂಡಾಮಂಡಲ ವಾಗಿದ್ದಾನೆ. ತಮಗೆ ಉಳಿಗಾಲ ಇಲ್ಲ ಎಂದು ಭಾವಿಸಿದ ಪ್ರಿಯತಮ ಸತೀಶ್ ಹಾಗೂ ವಿದ್ಯಾ ಸೇರಿ ಚಾಕುವಿನಿಂದ ಚುಚ್ಚಿ ಹನುಮೇಗೌಡನ ಕೊಲೆ ಮಾಡಿ ಪರಾರಿಯಾಗಿದ್ದರು.ತುಮಕೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಈ ಪ್ರಣಯಪಕ್ಷಿಗಳ ಹೆಡೆಮುರಿಕಟ್ಟಿದ್ದಾರೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ