Breaking News

ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರದಾಳಿ

Spread the love

ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿರುವ ನಡುವೆಯೇ ಪುಣೆಯಲ್ಲಿ ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿರುವ ಘಟನೆ ಶನಿವಾರ (ಜೂನ್ 25) ನಡೆದಿದೆ.

 

ಈ ಹಿನ್ನೆಲೆಯಲ್ಲಿ ನಗರದಲ್ಲಿರು ಶಿವಸೇನಾ ಮುಖಂಡರ ಕಚೇರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಪುಣೆ ಪೊಲೀಸ್ವರಿಷ್ಠಾಧಿಕಾರಿ ಎಲ್ಲಾ ಪೊಲೀಸ್ ಠಾಣೆಗೆಳಿಗೆ ಸಂದೇಶವನ್ನು ರವಾನಿಸಿದ್ದಾರೆ. ಎಲ್ಲಾ ದ್ರೋಹಿಗಳಿಗೂ ಮತ್ತು ನಮ್ಮ ವರಿಷ್ಠ ಉದ್ಧವ್ ಠಾಕ್ರೆಗೆ ಕಿರುಕುಳ ನೀಡಿದ ಶಾಸಕರುಗಳಿಗೆ ಇದೇ ರೀತಿಯ ಶಾಸ್ತಿಯಾಗಲಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ.

ಶಿವಸೇನಾ ಶಾಸಕರ ಬಂಡಾಯದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ. ಶಿವಸೇನಾ ಪಕ್ಷವನ್ನು ನಾಶ ಮಾಡುವುದು ಬಿಜೆಪಿಯ ಗುರಿಯಾಗಿದೆ ಎಂದು ದೂರಿದ್ದಾರೆ.

ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷ ಸಭೆಯನ್ನು ಕರೆದಿದ್ದು, ಪಕ್ಷದ ಮುಖಂಡ, ಸಚಿವ ಬಾಳಾಸಾಹೇಬ್ ಥೋರಟ್ ಅವರ ನಿವಾಸದಲ್ಲಿ ಚರ್ಚೆ ನಡೆಯಲಿದೆ ಎಂದು ವರದಿ ತಿಳಿಸಿದೆ


Spread the love

About Laxminews 24x7

Check Also

ಬೀಡಾಡಿ ದನವನ್ನು ಕಾರಿಗೆ ತುಂಬಿಕೊಂಡು ಪರಾರಿ: ಪ್ರಮುಖ ಆರೋಪಿ ಬಂಧನ

Spread the loveಉಡುಪಿ: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು  ಹಿಂಸಾತ್ಮಕವಾಗಿ ಎಳೆದುಕೊಂಡು ಹೋಗಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ