Breaking News

ಬಾಡಿಗೆಗೆ ಕಾರು ಪಡೆದು ಬೀಚ್‌ನಲ್ಲಿ ಹುಚ್ಚಾಟ: ಪೇಚಿಗೆ ಸಿಲುಕಿದ ಚಾಲಕ

Spread the love

ಪಣಜಿ: ಗೋವಾ ಬೀಚ್‌ನಲ್ಲಿ ಪ್ರವಾಸಿಗನೊಬ್ಬ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ, ಪೇಚಿಗೆ ಸಿಲುಕಿದ ಘಟನೆ ಶುಕ್ರವಾರ (ಜೂ.17) ನಡೆದಿದೆ.

ದೆಹಲಿ ಮೂಲದ ಲಲಿತ್‍ಕುಮಾರ್ ದಯಾಳ್ ಎಂಬಾತ ಬಾಡಿಗೆಗೆ ಕಾರನ್ನು ಪಡೆದು ಕಡಲ ತೀರದಲ್ಲಿ ಚಲಾಯಿಸಿದ್ದಾನೆ.

ಈ ವೇಳೆ ಕಾರು ನೀರಿನಲ್ಲಿ ಮುಳುಗಿದೆ.

ಘಟನೆ ಹಣಜುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಲಲಿತ್‍ಕುಮಾರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು, ಶೇಟಯೆ ವಾಡಾದ ಸಂಗೀತಾ ಗವಂಡಾಳಕರ್ ರವರಿಗೆ ಸೇರಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ರೀತಿ ವರ್ತಿಸಿ ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಪ್ರವಾಸಿಗರ ವಿರುದ್ಧ ಹಾಗೂ ಪ್ರವಾಸಿಗರಿಗೆ ಖಾಸಗಿ ಕಾರುಗಳನ್ನು ನೀಡುವ ಕಾರು ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ