Breaking News

ದೇಶದಲ್ಲಿ ಅವಘಡ ಆಗುತ್ತೆ ಎಂದಿದ್ದೆ, ಅದೀಗ ಆರಂಭವಾಗಿದೆ. ಮುಂದೆ ದೊಡ್ಡ ಅಪಾಯವಿದೆ: ಕೋಡಿಶ್ರೀ ಭವಿಷ್ಯ

Spread the love

ಬಳ್ಳಾರಿ: ಇನ್ನು ಒಂದೂವರೆ ವರ್ಷದಲ್ಲಿ ಮಹಾಮಾರಿ ಕೋವಿಡ್​-19 ಸಂಪೂರ್ಣವಾಗಿ ಮರೆಯಾಗುತ್ತದೆ. ಆದರೆ, ಹೋಗುವಾಗ ವಿಶೇಷವಾದ ಕಷ್ಟ ಒಂದನ್ನು ಕೊಟ್ಟು ಹೋಗುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದರು.

 

ಬಳ್ಳಾರಿಯಲ್ಲಿ ಇಂದು ಮಾತನಾಡಿದ ಕೋಡಿಮಠದ ಶ್ರೀಗಳು, ಕೋವಿಡ್​ ಮತ್ತೆ ಬರುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಅದರಂತೆ ಕರೊನಾ ಪ್ರಕರಣಗಳು ನಿತ್ಯವು ಏರಿಕೆಯಾಗುತ್ತಿದೆ. ಆದರೆ, ಕೊವಿಡ್ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಕಣ್ಮರೆಯಾಗುತ್ತದೆ. ಆದರೆ, ಕರೊನಾ ಹೋಗುವಾಗ ಜಗತ್ತಿನಾದ್ಯಂತ ಕುಡಿಯುವುದಕ್ಕೆ ನೀರಿಲ್ಲದಂತೆ ಆಗುತ್ತದೆ. ಅಷ್ಟೊಂದು ನೋವನ್ನು ಕೊಡುತ್ತದೆ ಎಂದು ಭಯಾನಕ ಭವಿಷ್ಯ ನುಡಿದರು.

ಕೋವಿಡ್ ವಿಶೇಷ ಏನೆಂದರೆ, ಮನುಷ್ಯನಿಗೆ ಕಷ್ಟ ಅಂತಾ ಬಂದಾಗ ಮಾತ್ರ ದೇವರು, ಧರ್ಮ ಅಂತಾನೆ ಮತ್ತು ಪ್ರಾರ್ಥನೆ‌ ಮಾಡ್ತಾನೆ. ಆದರೆ, ಕೋವಿಡ್ ನೇರವಾಗಿ ಬಂದು ದೇವರನ್ನೆ ಹಿಡಿದುಕೊಂಡಿತು. ಹೀಗಾಗಿ ದೇವಸ್ಥಾನದ ಬಾಗಿಲಗಳು ಮುಚ್ಚಿದವು. ಆ ಮೇಲೆ ಜನರ ಮೇಲೆ ಬಂತು. ನಂತರ ನೀರಿನ ಮೇಲೆ ಬಂತು. ಬಳಿಕ ಭೂಮಿಯ ಮೇಲೆ ಬಂತು. ಒಂದೂವರೆ ವರ್ಷದಲ್ಲಿ ಹೋಗುತ್ತದೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತದೆ. ಹೀಗಾಗಿ ಈಗಿನಿಂದಲೇ ಎಚ್ಚರ ವಹಿಸಿದರೆ ಅದರಿಂದ ತಪ್ಪಿಕೊಳ್ಳಬಹುದು. ಈಗ ಕೋವಿಡ್ ಗಾಳಿಯ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು ಎಂದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ