Breaking News

ಹೈವೇಯಲ್ಲಿ ಹಾಕಿದ್ದ ಅಂಗಡಿ ತೆಗೆಯಿರಿ ಎಂದಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ

Spread the love

ಹಾವೇರಿ: ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯನಿರತ ಇಬ್ಬರು ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ನಡೆದಿದೆ.

ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ್ ಹರಿಜನ ಮತ್ತು ದುಂಡಪ್ಪ ಸಿಬ್ಬಂದಿ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಲ್ಲೆ ಮಾಡಿದ ಆರೋಪಿಗಳನ್ನು ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.

ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಅಂಗಡಿ ಮುಂದಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ತಿಂಡಿ-ತಿನ್ನಿಸುಗಳ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು.

ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮತ್ತಿಬ್ಬರು ಪೊಲೀಸರು ಅಂಗಡಿ ಹತ್ತಿರ ಬರುವುದನ್ನು ನೊಡಿ ಆರೋಪಿಯೊಬ್ಬ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


Spread the love

About Laxminews 24x7

Check Also

ಮೆಕ್ಕೆಜೋಳ ರಾಶಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು – 4 ಲಕ್ಷ ರೂ. ಮೌಲ್ಯದ ಜೋಳ ಸುಟ್ಟು ಭಸ್ಮ

Spread the love ಹಾವೇರಿ: 8 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ  ರಾಶಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಮೆಕ್ಕೆಜೋಳದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ