Breaking News

ಬಸ್ಸಿನಲ್ಲೇ ಬಾಲಕಿಗೆ ಸಾರಾಯಿ ಕುಡಿಸಿ ಸಾಮೂಹಿಕ ಅತ್ಯಾಚಾರ!

Spread the love

 

ಬೇತಿಯಾ(ಬಿಹಾರ): ದೇಶದಲ್ಲಿ ನಿರ್ಭಯಾ ಘಟನೆಯಂತಹ ಅತ್ಯಾಚಾರಗಳು ಬೆಳಕಿಗೆ ಬರುತ್ತಲೇ ಇವೆ.

ಇದರ ವಿರುದ್ಧ ಪೊಲೀಸ್​ ಇಲಾಖೆ ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಆರೋಪಿಗಳು ಮಾತ್ರ ತಮ್ಮ ದುರಾಭ್ಯಾಸ ಮುಂದುವರಿಸುತ್ತಲೇ ಇದ್ದಾರೆ. ನಿರ್ಭಯಾದಂತಹ ಅತ್ಯಾಚಾರವೊಂದು ಬಿಹಾರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಅಮಲು ಪದಾರ್ಥ ನೀಡಿ ಅತ್ಯಾಚಾರ: ಪಾಟ್ನಾಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೆಲ್ಪರ್​​ಬಸ್​​​​ನಲ್ಲಿ ಕೂರಿಸಿದ್ದಾನೆ. ನಂತರ ಬಸ್ ನಿಲ್ದಾಣದಿಂದ ಚಾಲಕ ಬಸ್ ಅನ್ನು ಬೈಪಾಸ್ ರಸ್ತೆಗೆ ತೆಗೆದುಕೊಂಡು ಹೋಗಿದ್ದಾನೆ. ಈ ಅನುಕ್ರಮದಲ್ಲಿ ಆರೋಪಿಗಳು ಬಾಲಕಿಗೆ ಪಾನೀಯದಲ್ಲಿ ಅಮಲು ಬೆರೆಸಿ ಕುಡಿಸಿದ್ದಾರೆ. ಬಾಲಕಿ ಪ್ರಜ್ಞೆ ತಪ್ಪಿದ ಬಳಿಕ ಬಸ್​​​​ನಲ್ಲೇ ಒಬ್ಬರು ಬಳಿಕ ಒಬ್ಬರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಬಸ್​​​​​​​ನೊಳಗೆ ಬೀಗ ಹಾಕಿ ಆರೋಪಿಗಳು ಪರಾರಿ: ಅತ್ಯಾಚಾರದ ಬಳಿಕ ಕಂಡಕ್ಟರ್​, ಚಾಲಕ ಮತ್ತು ಹೆಲ್ಪರ್​​ ಸಂತ್ರಸ್ತೆಯನ್ನು ಬಸ್​​​ನಲ್ಲಿಟ್ಟು ಬೀಗ ಹಾಕಿ ಪರಾರಿಯಾಗಿದ್ದಾರೆ. ಬಾಲಕಿಗೆ ಪ್ರಜ್ಞೆ ಬಂದಾಗ ಒಳಗಿನಿಂದ ಬಸ್‌ನ ಬಾಗಿಲು ಬಡಿದಿದ್ದಾಳೆ. ಈ ವೇಳೆ, ದಾರಿಹೋಕರು ಬಸ್‌ನ ಬಾಗಿಲು ತೆರೆದು ಸ್ಥಳೀಯ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ನನಗೆ ಸಾರಾಯಿ ಕುಡಿಸಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ