Breaking News

ಬಿಜೆಪಿ ಹಾಗೂ ಆರ್ ಎಸ್ ಎಸ್ ಬೇರೆ ಕೆಲಸ ಇಲ್ಲ ಚಡ್ಡಿಗಳು ಮಾಡುವದು ಚಡ್ಡಿ ಕೆಲಸನೇ,: ಸಿದ್ಧರಾಮಯ್ಯ

Spread the love

ಹುಬ್ಬಳ್ಳಿ :ಬಿಜೆಪಿ ಹಾಗೂ ಆರ್ ಎಸ್ ಎಸ್ ಬೇರೆ ಕೆಲಸ ಇಲ್ಲ ಚಡ್ಡಿಗಳು ಮಾಡುವದು ಚಡ್ಡಿ ಕೆಲಸನೇ, ನನ್ನ ಆರೋಪ ಸತ್ಯ ಇರೋದ್ರಿಂದ ಚಡ್ಡಿಗಳು ಮೌನವಾಗಿದ್ದಾರೆ ಅಂತ ಮಾಜಿ‌ ಸಿಎಂ ಸಿದ್ಧರಾಮಯ್ಯ ಮತ್ತೊಮ್ಮೆ ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಮಾತನಾಡಿರುವ ಅವರು,ನಾನು ಮೊದಲಿಂದಲೂ ಆರ್ ಎಸ್ ಎಸ್ ವಿರೋಧಿ, ಸರಸಂಘಚಾಲಕರು ಒಂದೇ ಜಾತಿಗೆ ಸೇರಿದವರು ಎಂಬ ಆರೋಪಕ್ಕೆ ಉತ್ತರವಿಲ್ಲ, ದಲಿತ, ಹಿಂದುಳಿದವರು ಯಾರೂ ಸರಸಂಘಚಾಲಕರನ್ನಾಗಿ ಮಾಡಿಲ್ಲ. ನಾನು ಆರ್ ಎಸ್ ಎಸ್ ಬಗ್ಗೆ ಮಾತನಾಡಿದಾಗಲೆಲ್ಲಾ ನಾನು ಸುಟ್ಟ ಹೋಗತ್ತಿನಿ ಅಂತ ಬಿಜೆಪಿ ‌ನಾಯಕರು ಹೇಳುತ್ತಾರೆ ನಾನು ಇನ್ನೂ ಇದ್ದಿನಿ ಸುಟ್ಟು ಹೋಗಿಲ್ಲ ಅಂತ ವ್ಯಂಗ್ಯವಾಡಿದರು. ಇನ್ನೂ ರಾಜ್ಯಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು,ಕಾಂಗ್ರೆಸ್ ಅಲ್ಪ ಸಂಖ್ಯಾತ ಅಭ್ಯರ್ಥಿ ರಾಜ್ಯ ಸಭೆಗೆ ಹಾಕಿದೆ,

ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸಬೇಕು ಅನ್ನೋದು ನಮ್ಮ ಉದ್ದೇಶ.ಆದರೆ ಜೆಡಿಎಸ್ ಕೂಡಾ ಅಭ್ಯರ್ಥಿ ಹಾಕಿ ಚುನಾವಣೆ ಜಟಿಲಗೊಳಿಸಿದೆ.ಕೋಮುವಾದಿ ಅಭ್ಯರ್ಥಿ ಸೋಲಿಸುವ ಉದ್ದೇಶ ಇದ್ದಿದ್ದರೆ ಅಭ್ಯರ್ಥಿ ಹಾಕುತ್ತಿರಲಿಲ್ಲ.ದೇವೆಗೌಡರು ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕಿರಲಿಲ್ಲ. ದೇವೆಗೌಡರು ಗೆಲ್ಲಬೇಕು ಎನ್ನುವ ಉದ್ದೇಶ ಕಾಂಗ್ರೆಸ್ದಾಗಿತ್ತು‌. 


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ