Breaking News

ಆರ್​ಎಸ್​ಎಸ್​ ಚಡ್ಡಿ ಸುಡುವ ಇವರು ಮೊದಲು ಅವರ ಚಡ್ಡಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲಿ: ಜೋಶಿ

Spread the love

ವಿಜಯಪುರ: ಆರ್​ಎಸ್​ಎಸ್​ ಚಡ್ಡಿ ಸುಡುವ ಇವರು ಮೊದಲು ಅವರ ಚಡ್ಡಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲಿ, ದೇಶಾದ್ಯಂತ ಅವರ ಚಡ್ಡಿಯನ್ನು ಜನರೇ ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ನಿಡಗುಂದಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲ ಕಡೆಯು ಜನ ನಿಮ್ಮ ಚಡ್ಡಿ ಕಸಿದುಕೊಂಡಿದ್ದಾರೆ.

ರಾಜಸ್ತಾನದಲ್ಲಿ ಕಾಂಗ್ರೆಸ್ ಚೆಡ್ಡಿ ಲೂಸ್ ಆಗಿದೆ.ಜನ ಚೆಡ್ಡಿ ಕಸಿದುಕೊಂಡಿದ್ದಕ್ಕೆ ಕಾಂಗ್ರೆಸ್ RSS ಚಡ್ಡಿ ಸುಡುವ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅಲ್ಲಲ್ಲಿ ಉಳಿದಿರುವ ಚಡ್ಡಿಯನ್ನು ಜನ ಕಸಿದುಕೊಳ್ತಾರೆ.ಹಾಗೆಯೇ ಎಲ್ಲಾ ಚಡ್ಡಿಯನ್ನು ಕಸಿದು ಕಾಂಗ್ರೆಸ್ಸನ್ನು ಬೆತ್ತಲೆ ಮಾಡ್ತಾರೆ ಎಂದಿರುವ ಅವರು, ಮೊದಲು ಹುಚ್ಚರಂತೆ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

ರಾಹುಲ್ ಗಾಂಧಿ ಅಜ್ಜ ಮುತ್ತಜ್ಜ, ಅಜ್ಜಿ RSS ಒಳಗೊಳಗೆ ಸುಡಲು ಹೋಗಿದ್ದರು. ಅವರ ರಾಜಕೀಯ ಸ್ಥಿತಿ ಏನಾಯಿತೆಂದು ಎಲ್ಲರೂ ನೋಡಿದ್ದಾರೆ ಎಂದು ಹೇಳಿದ್ದಾರೆ


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ