Breaking News

ಪಿಎಸ್‍ಐ ನೇಮಕಾತಿ ಅಕ್ರಮ- ಮತ್ತೋರ್ವನ ಬಂಧನ, ಬಂಧಿತ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆ

Spread the love

ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಜಿಲ್ಲೆಯ ಜೇವರ್ಗಿ ತಾಲೂಕಿನ ವಸಂತರಾಯ್ ನರಿಬೋಳ ಬಂಧನವಾದ ಇನ್ನೋರ್ವ ಆರೋಪಿಯಾಗಿದ್ದು, ಇಲ್ಲಿಯವರೆಗೆ ಅಕ್ರಮದಲ್ಲಿ ಭಾಗಿಯಾಗಿ ಬಂಧನವಾದ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

ವಸಂತರಾಯ್, ಅಭ್ಯರ್ಥಿ ಎನ್.ವಿ.ಸುನೀಲ್ ಕುಮಾರ್ ತಂದೆಯಾಗಿದ್ದು, ಸುನೀಲ್ ನನ್ನ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಕ್ಕೆ ಆರ್.ಡಿ.ಪಾಟೀಲ್ ಮೊರೆ ಹೋಗಿದ್ದರು.

ಇತ್ತೀಚೆಗಷ್ಟೇ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಅಭ್ಯರ್ಥಿಯಾಗಿದ್ದ ಶಾಂತಿಬಾಯಿ ಹಾಗೂ ಪತಿ ಬಸಯ್ಯಾ ನಾಯಕ ಎರಡು ತಿಂಗಳ ಬಳಿಕ ಸಿಐಡಿ ಬಲೆಗೆ ಬಿದ್ದಿದ್ದರು. ಹೈದರಾಬಾದ್‍ನಲ್ಲಿ ಸಿಐಡಿ ಪೊಲೀಸರು ಶಾಂತಿಬಾಯಿ ಹಾಗೂ ಆಕೆಯ ಪತಿ ಬಸಯ್ಯಾ ನಾಯಕ್‍ನನ್ನು ಬಂಧಿಸಿದ್ದರು. 


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ