Breaking News

ಗೋವಾ ಪ್ರವಾಸಕ್ಕೆಂದು ತೆರಳಿದ್ದ ಮಹಾರಾಷ್ಟ್ರದ 11 ಯುವಕರಿಗೆ ವಂಚನೆ ,ಹುಡುಗಿಯರೊಂದಿಗೆ 11 ಯುವಕರನ್ನು ನಿಲ್ಲಿಸಿ, ಅರೆಬೆತ್ತಲೆ ವಿಡಿಯೋ ಮಾಡಿ ಬ್ಲಾಕ್​ ಮೇಲ್

Spread the love

ಕೊಲ್ಹಾಪುರ(ಮಹಾರಾಷ್ಟ್ರ): ಗೋವಾ ಪ್ರವಾಸಕ್ಕೆಂದು ತೆರಳಿದ್ದ ಮಹಾರಾಷ್ಟ್ರದ 11 ಯುವಕರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅವರನ್ನೆಲ್ಲ ಬೆದರಿಸಿ, ಕೊಠಡಿವೊಂದರಲ್ಲಿ ಕೂಡಿ ಹಾಕಲಾಗಿದ್ದು, ಹುಡುಗಿಯರೊಂದಿಗೆ ಅರೆಬೆತ್ತಲೆ ವಿಡಿಯೋ ಸೆರೆ ಹಿಡಿದು, ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರದಿಂದ ಗೋವಾಕ್ಕೆ ತೆರಳಿದ್ದ ಯುವಕರನ್ನ ಬೊಂಡಗೇಶ್ವರ ದೇವಸ್ಥಾನದ ಬಳಿ ಕೆಲವು ಅಪರಿಚಿತ ವ್ಯಕ್ತಿಗಳು ತಡೆದು ನಿಲ್ಲಿಸಿದ್ದಾರೆ. ಈ ವೇಳೆ, ನಮ್ಮ ಹೋಟೆಲ್​​​​ನಲ್ಲಿ ಒಳ್ಳೆಯ ಊಟ ಸಿಗುತ್ತದೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮೋಸ ಮಾಡಿದ್ದಾರೆ.ಈ ವೇಳೆ ಅವರನ್ನ ಥಳಿಸಲಾಗಿದ್ದು. ಬಟ್ಟೆ ತೆಗೆದು ಹುಡುಗಿಯರೊಂದಿಗೆ ನಿಲ್ಲಿಸಿ, ವಿಡಿಯೋ ಮಾಡಿ ಬ್ಲಾಕ್​ ಮೇಲ್ ಮಾಡಿದ್ದಾರೆ. ಈ ವೇಳೆ ಅವರ ಬಳಿಯ ಹಣ, ಮೊಬೈಲ್ ಫೋನ್, ಚಿನ್ನದ ಉಂಗುರಗಳು ಮತ್ತು ಚೈನ್​ಗಳನ್ನ ಕಿತ್ತುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿದ್ರೆ, ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ.

ಗೋವಾದ ಮಪಾಸಾ ಎಂಬಲ್ಲಿ ಈ ಘಟನೆ ನಡೆದಿದ್ದು, ಚಂದಗಡ ತಾಲೂಕಿನ 11 ಯುವಕರು ಇದೀಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಇವರೆಲ್ಲರೂ ಗೋವಾದ ಸೈಟ್ ಸೀಯಿಂಗ್​ಗೆ ಹೋಗಿದ್ದರು. ಅಲ್ಲಿಂದ ಮನೆಗೆ ವಾಪಸ್​ ಬರುತ್ತಿದ್ದಾಗ ಈ ಘಟನೆ ನಡೆದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ