Breaking News

ಇನ್‍ಸ್ಟಾದಲ್ಲಿ ಆರಂಭ, ಬೀದಿಯಲ್ಲಿ ಮಾರಾಮಾರಿ – ರಸ್ತೆಯಲ್ಲೇ ವಿದ್ಯಾರ್ಥಿನಿಯರ ಗ್ಯಾಂಗ್‍ವಾರ್

Spread the love

ಬೆಂಗಳೂರು: ನಗರದ ಎರಡು ಪ್ರತಿಷ್ಠಿತ ಖಾಸಗಿ ಶಾಲೆ ವಿದ್ಯಾರ್ಥಿನಿಯರ ಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಬೀದಿಯಲ್ಲಿ ಬಡಿದಾಡಿಕೊಂಡ ವೀಡಿಯೋ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಾರಂಭವಾಗಿದ್ದು ಹೇಗೆ?
ಇನ್‍ಸ್ಟಾಗ್ರಾಮ್ ಮೆಸೇಜ್‍ನಲ್ಲಿ ಯುವಕನೊಬ್ಬನ ತಂದೆ ವಿಚಾರವಾಗಿ ಗಲಾಟೆ ಪ್ರಾರಂಭವಾಗಿದೆ. ಇವನ ಬೆಂಬಲಕ್ಕೆ ವಿದ್ಯಾರ್ಥಿನಿಯರು ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ನಡುವೆ ‘ನಮ್ಮ ಸ್ಕೂಲ್ ಟಾಪ್ ಸ್ಕೂಲ್’ ಎಂದು ಅವಾಜ್ ಹಾಕುತ್ತ ಕೆಟ್ಟ ಕೆಟ್ಟ ಪದಗಳನ್ನು ಬಳಸಿದ್ದಾರೆ. ಅಷ್ಟಕ್ಕೆ ಮುಗಿಯದೆ ವಿದ್ಯಾರ್ಥಿನಿಯರು, ಮನೆಯ ಬಳಿ ಬಂದು ಗಲಾಟೆ ಮಾಡ್ತೀನಿ, ಹೊಡಿತೀನಿ ಎಂದು ಬೆದರಿಕೆ ಹಾಕಿದ್ದಾರೆ.

ಕೊನೆಗೂ ನಗರದ ಸೆಂಟ್ ಮಾರ್ಕ್ಸ್ ನಡು ರಸ್ತೆಯಲ್ಲೇ 20 ವಿದ್ಯಾರ್ಥಿನಿಯರು ಈ ಕುರಿತು ಮಾತನಾಡಲು ಪ್ರಾರಂಭ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ‘ನಮ್ಮ ಸ್ಕೂಲ್ ಅಂದ್ರೆ ಗೊತ್ತಾ? ನಮ್ಮ ಸ್ಕೂಲ್ ಟಾಪ್ ಸ್ಕೂಲ್’ ಎಂದು ಹಾಕಿಸ್ಪಿಕ್ ಹಿಡಿದು ಬಡಿದಾಡಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ವೈರಲ್ ಆಗಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ