Breaking News

ಈ ತಿಂಗಳು ‘ಸಿಎಸ್ ರವಿಕುಮಾರ್’ ನಿವೃತ್ತಿ: ಹುದ್ದೆಗಾಗಿ 9 ಮಂದಿ ರೇಸ್, ‘ಶಾಲಿನಿ ರಜನೀಶ್’ ಹೆಸರು ಮುಂಚೂಣಿಯಲ್ಲಿ.!

Spread the love

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿರುವಂತ ಪಿ.ರವಿಕುಮಾರ್ ( CS P Ravikumar ) ಅವರು, ಇದೇ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗುತ್ತಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಹೊಸ ಸಿಎಸ್ ಆಯ್ಕೆ ಮಾಡುವ ಅಧಿಕಾರವನ್ನು ಸಚಿವ ಸಂಪುಟವು ಸಿಎಂ ಬಸವರಾಜ ಬೊಮ್ಮಾಯಿಯವರಿಗೇ ನೀಡಿದೆ.

ಹೀಗಾಗಿ ಈಗ ಸಿಎಸ್ ಹುದ್ದೆಗಾಗಿ ಫೈಟ್ ನಡೆಯುತ್ತಿದ್ದು, 9 ಮಂದಿ ರೇಸ್ ನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೇ, ಸಿಎಸ್ ಪಿ.ರವಿಕುಮಾರ್ ನಿವೃತ್ತಿಯ ಬಳಿಕ, ಹೊಸ ಸಿಎಸ್ ಆಯ್ಕೆಯ ಅಧಿಕಾರವನ್ನು ಕುರಿತು ಚರ್ಚಿಸಲಾಯಿತು. ಅಂತಿಮವಾಗಿ ಸಿಎಂಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಇದೀಗ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಒಂಭತ್ತು ಐಎಎಸ್ ಅಧಿಕಾರಿಗಳು ಮುಂಚೂಣಿಯಲ್ಲಿದ್ದಾರೆ. ಈ ಒಂಭತ್ತು ಮಂದಿಯಲ್ಲಿ ಒಬ್ಬರನ್ನು ಸಿಎಂ ಬೊಮ್ಮಾಯಿ ಆಯ್ಕೆ ಮಾಡಲಿದ್ದಾರೆ.ಅಂದಹಾಗೇ ಸಿಎಸ್ ರೇಸ್ ನಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದಂತ ವಂದಿತಾ ಶರ್ಮಾ, ರಜನೀಶ್ ಗೋಯಲ್, ಅಜಯ್ ಸೇಠ್, ಐಎಸ್‌ಎನ್ ಪ್ರಸಾದ್, ಇ.ವಿ ರಮಣರೆಡ್ಡಿ, ರಾಕೇಶ್ ಸಿಂಗ್, ಶಾಲಿನಿ ರಜನೀಶ್, ಕುಮಾರ ನಾಯಕ್ ಹಾಗೂ ಗೌರವ ಗುಪ್ತ ಇದ್ದಾರೆ. ಆದ್ರೇ ಇವರಲ್ಲಿ ಶಾಲಿನಿ ರಜನೀಶ್ ( Shalini Rajneesh ) ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ