Breaking News

ಪುಷ್ಪಾ’ ಸ್ಟಾರ್ ಅಲ್ಲು ಅರ್ಜುನ್ ಡೈಲಾಗ್ ಮರುಸೃಷ್ಟಿಸಿದ ಹೂ ವ್ಯಾಪಾರಿ…!

Spread the love

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್ ಸಿನಿಮಾ ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳಾಗಿದೆ. ಇನ್ನೂ ಚಿತ್ರದ ಸಂಭಾಷಣೆಗಳು, ಹಾಡುಗಳ ಬಗ್ಗೆ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ ಅಲ್ಲು ಅವರ ಕಾಶ್ಮೀರದ ಅಭಿಮಾನಿಯೊಬ್ಬರ ಚಿತ್ರದ ಪ್ರಮುಖ ಡೈಲಾಗ್ ಅನ್ನು ಹೇಳಿದ್ದಾರೆ.

ಈ ವಿಡಿಯೋ ಸದ್ಯ ವೈರಲ್ ಆಗಿದೆ.ಕಾಶ್ಮೀರದಿಂದ ಆಗಾಗ್ಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಟ್ವಿಟ್ಟರ್ ಬಳಕೆದಾರರಾದ ನಮ್ರತಾ, ಇದೀಗ ಹೂವು ಮಾರಾಟಗಾರನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಂಭಾಷಣೆಯನ್ನು ಹೂ ಮಾರಾಟಗಾರ ಮರುಸೃಷ್ಟಿಸಿದ್ದಾರೆ. ಯಾರೋ ಪುಷ್ಪಾ ಅವರನ್ನು ಹೂವು ಎಂದು ತಪ್ಪಾಗಿ ಗ್ರಹಿಸಿದ್ದಾರೆ, ಪುಷ್ಪ ಅಂದ್ರೆ ಅಗ್ನಿ ಎಂಬ ಸಂಭಾಷಣೆಯನ್ನು ಅವರು ಮರುಸೃಷ್ಟಿಸಿದ್ದಾರೆ..

ಸುಂದರವಾದ ದಾಲ್ ಸರೋವರದ ಮುಂದೆ, ವರ್ಣರಂಜಿತ ಹೂವುಗಳಿಂದ ತುಂಬಿದ ಶಿಕಾರದಲ್ಲಿ ಹೂವು ಮಾರಾಟಗಾರ ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದ ಸಂಭಾಷಣೆಯನ್ನು ಹೇಳಿದ್ದಾರೆ. ಇದೀಗ, ಕಾಶ್ಮೀರಿ ಹೂವು-ಮಾರಾಟಗಾರನ ಪುಷ್ಪಾ ವಿಡಿಯೋವನ್ನು ಇಂಟರ್ನೆಟ್ ಆನಂದಿಸಿದ್ದು, ಅದು ವೇಗವಾಗಿ ವೈರಲ್ ಆಗುತ್ತಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ