Breaking News

ಮಂಗಳೂರು:ಚಿಕನ್ ಸೆಂಟರ್ ಸಿಬ್ಬಂದಿಯ ಹಲ್ಲೆ ಪ್ರಕರಣ; ಇಬ್ಬರು ರೌಡಿಶೀಟರ್ ಗಳ ಬಂಧನ

Spread the love

ಮಂಗಳೂರು : ನಗರದ ವೆಲೆನ್ಸಿಯಾದಲ್ಲಿ ಚಿಕನ್ ಅಂಗಡಿಯ ಸಿಬ್ಬಂದಿಗೆ ಹಲ್ಲೆಗೈದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಪ್ರಕರಣ ನಡೆದಿದ್ದು ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರು ರೌಡಿಗಳನ್ನು ಬಂಧಿಸಿದ್ದಾರೆ.

ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್ ಗಳಾದ ಪ್ರೀತಂ ಅಲಿಯಾಸ್ ಪ್ರೀತಮ್ ಪೂಜಾರಿ ಮತ್ತು ಧೀರಜ್ ಕುಮಾರ್ ಅಲಿಯಾಸ್ ಬಂಧಿತರು .

ಭಾನುವಾರ ಸಂಜೆ ವೆಲೆನ್ಸಿಯಾದ ಕೋಳಿ ಅಂಗಡಿಯ ಮುಂದೆ ಇವರಿಬ್ಬರು ಸೇರಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸುತ್ತಿದ್ದರು ಈ ವೇಳೆ ಕೋಳಿ ಅಂಗಡಿ ಉಳಿದ ಸಿಬ್ಬಂದಿ ಪ್ರಶ್ನೆ ಮಾಡಿದ್ದು ಇಲ್ಲಿ ರಂಪಾಟ ಮಾಡದಂತೆ ಸೂಚಿಸಿದ್ದಾರೆ .

ಇದರಿಂದ ಸಿಟ್ಟಿಗೆದ್ದ ರೌಡಿಗಳು ಚಿಕನ್ ಸೆಂಟರ್ ನಲ್ಲಿದ್ದ ಸುನಿಲ್ ಅನಂತ್ ಮತ್ತು ಜೀವನ ಎಂಬ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೆ ಚೂರಿಯಿಂದ ಇರಿಯಲು ಯತ್ನಿಸಿದ್ದಾರೆ ಅಷ್ಟರಲ್ಲಿ ಇತರ ಸಾರ್ವಜನಿಕರು ಸೇರಿದ್ದು ಚೂರಿಯಿಂದ ಹಲ್ಲೆ ಮಾಡುವುದನ್ನ ತಪ್ಪಿಸಿದ್ದಾರೆ . ಅನಂತರ ಸಾರ್ವಜನಿಕರಿಗೂ ಚೂರಿ ತೋರಿಸಿ ಬೆದರಿಸಿದ್ದು ಯಾರಾದ್ರೂ ಹತ್ತಿರ ಬಂದಲ್ಲಿ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ .ಇಷ್ಟರಲ್ಲೇ ಪೊಲೀಸರು ಕಂಟ್ರೋಲ್ ರೂಮಿಗೆ ಫೋನ್ ಹೋಗಿತ್ತು ಸಂಜೆ 7ಗಂಟೆ ಸುಮಾರಿಗೆ ಬೀದಿ ರಂಪ ಮಾಡುತ್ತಿದ್ದ ಜಾಗಕ್ಕೆ ಪೊಲೀಸರು ಬಂದಿದ್ದು ಸಾರ್ವಜನಿಕರ ಸಹಾಯದಿಂದ ಇಬ್ಬರು ರೌಡಿಗಳನ್ನ ಬಂಧಿಸಿದ್ದಾರೆ .


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ