Breaking News

ತೈಲ ತುಟ್ಟಿಗೆ ವಿರಾಮ?; ಬ್ಯಾರೆಲ್​ಗೆ 99 ಡಾಲರ್​ಗೆ ಇಳಿದ ಕಚ್ಚಾತೈಲ ದರ

Spread the love

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲ ದರ 100 ಡಾಲರ್​ಗಿಂತ ಕೆಳಗಿಳಿದಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಕ್ಷೀಣಿಸಿದೆ. ಇದಕ್ಕೆ ಪುಷ್ಟಿಯೆಂಬಂತೆ, ಕಳೆದ ನಾಲ್ಕು ದಿನಗಳಿಂದ ತೈಲ ದರ ಪರಿಷ್ಕರಣೆ ಆಗಿಲ್ಲ.

 

ಸದ್ಯ ಬ್ಯಾರಲ್ ಕಚ್ಚಾತೈಲ ದರ 99 ಡಾಲರ್​ಗೆ ಇಳಿಕೆಯಾಗಿದೆ. ಇಷ್ಟಾದರೂ ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಮೌಲ್ಯ ಬಲಿಷ್ಠವಾಗುತ್ತ ಸಾಗುತ್ತಿದೆ. ಪರಿಣಾಮ ಯಾವುದನ್ನೂ ಊಹಿಸುವುದು ಸಾಧ್ಯವಾಗುತ್ತಿಲ್ಲ ಎಂದೂ ಪರಿಣತರು ಹೇಳುತ್ತಾರೆ. ಕಚ್ಚಾತೈಲ ಉತ್ಪಾದಕ ರಾಷ್ಟ್ರಗಳಿಂದ ಗರಿಷ್ಠ ಆಮದು ಮಾಡಿಕೊಳ್ಳುವ ಚೀನಾ, ಭಾರತ, ಯುರೋಪ್​ಗಳಲ್ಲಿ ಕೋವಿಡ್ 19 ಸಂಕಷ್ಟದ ಕಾರಣ ಆಮದು ಪ್ರಮಾಣ ಕಡಿಮೆ ಆಗಿತ್ತು. ಈಗ ಚೇತರಿಕೆ ಕಂಡಿರುವುದು ಕೊಂಚ ಸಮಾಧಾನಕರ ಸಂಗತಿ.

ಭಾರತ ತನ್ನ ಕಚ್ಚಾತೈಲ ಆಮದು ಪ್ರಮಾಣದಲ್ಲಿ ಶೇ.2 ಅನ್ನು ರಷ್ಯಾದಿಂದ ತರಿಸಿಕೊಳ್ಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಏ.7ರಿಂದ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಆಗಿಲ್ಲ. ಏಪ್ರಿಲ್ 7ರಂದು ಭಾರತದಲ್ಲಿ ಕಚ್ಚಾತೈಲ ದರ ಪ್ರತಿ ಬ್ಯಾರೆಲ್​ಗೆ 97.59 ಡಾಲರ್ ಇತ್ತು. ಮಾರ್ಚ್ ಮಧ್ಯಭಾಗದಲ್ಲಿ ಇದು 128 ಡಾಲರ್ ತಲುಪಿತ್ತು. ಅಲ್ಲಿಂದೀಚೆಗೆ ಶೇ.24 ದರ ಕುಸಿತ ಕಂಡಿದೆ. ಏ.6ರಂದು ಪೆಟ್ರೋಲ್, ಡೀಸೆಲ್ ದರ ಲೀಟರಿಗೆ 80 ಪೈಸೆ ಏರಿತ್ತು. ಏ.6ರ ತನಕ ಒಟ್ಟು 16 ದಿನಗಳಲ್ಲಿ 14 ದಿನ ದರ ಏರಿದ್ದು, ಒಟ್ಟು 10 ರೂ. ಹೆಚ್ಚಳ ಕಂಡಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ