Breaking News

ಯಂತ್ರದ ಬೆಲ್ಟ್​ಗೆ ವೇಲ್​​ ಸಿಲುಕಿ ಯುವತಿ ಸಾವು: ಕಾರ್ಖಾನೆ ಮಾಲೀಕನ ವಿರುದ್ಧ ಪ್ರಕರಣ

Spread the love

ಬೆಂಗಳೂರು: ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ನಡೆದ ಯಡವಟ್ಟಿಗೆ ಯುವತಿ ಬಲಿಯಾದ ಘಟನೆ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ. ನಾಯಂಡಹಳ್ಳಿಯ ಜೆಡ್ ಎಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಸಂಜೆ 5.15ರ ಸುಮಾರಿಗೆ ದುರಂತ ಸಂಭವಿಸಿದೆ.

ಶಾಜಿಯಾ (28) ಮೃತ ಯುವತಿ. ಯಂತ್ರವನ್ನು ಸ್ವಿಚ್ ಆಫ್ ಮಾಡುವಾಗ ಯಂತ್ರದ ಬೆಲ್ಟ್‌ಗೆ ತಾನು ಧರಿಸಿದ್ದ ವೇಲ್ ಸಿಲುಕಿ ಯಂತ್ರದ ಮೇಲೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರವಾದ ಪೆಟ್ಟಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಫ್ಯಾಕ್ಟರಿಯ ಮಾಲೀಕನ ನಿರ್ಲಕ್ಷ್ಯ ಹಾಗೂ ಮುಂಜಾಗ್ರತಾ ಪರಿಕ್ರಮಗಳನ್ನು ನೀಡದೇ ಇರುವುದೇ ಕಾರಣ ಎನ್ನಲಾಗಿದೆ. ಮಾಲೀಕ ಜೀಶಾನ್ ವಿರುದ್ದ ಚಂದ್ರ ಲೇಔಟ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ