Breaking News

ವಿವಾದಾತ್ಮಕ ಹೇಳಿಕೆ ಕೊಟ್ಟ ಸಿದ್ದು ವಿರುದ್ಧ ಭುಗಿಲೆದ್ದ ಆಕ್ರೋಶ: ಡ್ಯಾಮೇಜ್ ಕಂಟ್ರೋಲ್​ಗೆ ಡಿಕೆಶಿ ಕಸರತ್ತು

Spread the love

ಬೆಂಗಳೂರು: ಇಂದು(ಶುಕ್ರವಾರ) ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಒಂದೇ ಒಂದು ಹೇಳಿಕೆ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್​ ಪಕ್ಷಕ್ಕೂ ಹಿರಿಸುಮುರಿಸು ತಂದೊಡ್ಡಿದ್ದು, ಡ್ಯಾಮೇಜ್ ಕಂಟ್ರೋಲ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಸರತ್ತು ನಡೆಸುತ್ತಿದ್ದಾರೆ.

​ಸರ್ಕಸ್ ಮಾಡುತ್ತಿದ್ದಾರೆ. ಹಿಜಾಬ್ ಕೆಂಡ ಕೆದಕಿ ಕಾಂಟ್ರೋವರ್ಸಿ ಕ್ರಿಯೆಟ್ ಮಾಡಿದ ಸಿದ್ದರಾಮಯ್ಯ, ಸ್ವಾಮೀಜಿ ವಿಚಾರ ಎಳೆದು ತಂದು ಕೈ ಸುಟ್ಟು ಕೊಂಡಿದ್ದಾರೆ.

ಹಿಂದುತ್ವ ವಿಚಾರದಲ್ಲಿ ಸಾಫ್ಟ್ ಆಗಿ ರಿಯಾಕ್ಟ್ ಮಾಡಿ ಎಂದು ಕಾಂಗ್ರೆಸ್​ ಶಾಸಕರು ಹೇಳಿದ್ದರೂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ಕೊಟ್ಟು ಕಾವಿಧಾರಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಸಿದ್ದರಾಮಯ್ಯರ ಮಾತಿಗೆ ಫುಲ್ ಅಲರ್ಟ್ ಆದ ಬಿಜೆಪಿ ನಾಯಕರು, ಕ್ಷಮೆ ಕೋರುವಂತೆ ಸಿದ್ದುಗೆ ಆಗ್ರಹಿಸುತ್ತಿದ್ದಾರೆ.

‘ಸ್ವಾಮೀಜಿಗಳು ಧರಿಸುವ ಪೇಟಕ್ಕೆ ಹಿಜಾಬ್​ ಅನ್ನು ಹೋಲಿಸಿದ್ದು ಎಷ್ಟು ಸರಿ? ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಬೇಡ ಎಂಬ ವಿಚಾರಕ್ಕೆ ಸ್ವಾಮೀಜಿಯವರು ಧರಿಸುವ ಪೇಟ ಮತ್ತು ಹಿಂದೂ ಮಹಿಳೆಯರು ತಲೆ ಮೇಲೆ ಸೆರಗು ಹಾಕುವ ವಿಧಾನಕ್ಕೆ ಹೋಲಿಕೆ ಮಾಡಿದ್ದು ಸರಿಯೇ? ಸ್ವಾಮೀಜಿಗಳು ತಲೆವಸ್ತ್ರ ಹಾಕಿಕೊಂಡು ಶಾಲೆಯಲ್ಲಿ ಕೂರಲ್ಲ. ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆಯೇ ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ