Breaking News

ಗೋಮಾಂಸ ತಿನ್ನುವುದನ್ನ ನಿಲ್ಲಿಸುವವರೆಗೂ ಈ ಬಹಿಷ್ಕಾರ ಮುಂದುವರೆಯಲಿದೆ: ಪ್ರಮೋದ್ ಮುತಾಲಿಕ್

Spread the love

ಬೆಳಗಾವಿ: ಮುಸ್ಲಿಂ ವಿಸ್ತಾರವಾದ, ಪ್ರತ್ಯೇಕವಾದ ಹಿನ್ನೆಲೆ ಆರ್ಥಿಕ ಬಹಿಷ್ಕಾರ, ಮುಸ್ಲಿಮರ ಜೊತೆಗೆ ವ್ಯಾಪಾರ ವಹಿವಾಟು ಮಾಡಬಾರದು ಅನ್ನೋದು ಪ್ರಾರಂಭವಾಗಿದೆ. ಹೀಗಾಗಿ ಜಾತ್ರೆಯಲ್ಲಿ ಮುಸ್ಲಿಂ ಅಂಗಡಿಗಳು ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆ ಬೆಂಬಲ ವ್ಯಕ್ತಪಡಿಸಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆಯ ಬೆಂಬಲವಿದೆ. ಮುಸ್ಲಿಂರ ಮಾನಸಿಕತೆ, ಕ್ರೌರ್ಯ ಮೊದಲಿನಿಂದಲೂ ಬಂದಿದೆ. ಇದನ್ನ ನಿಲ್ಲಿಸುವವರೆಗೂ ರೀತಿ ಪ್ರಕ್ರಿಯೆ ನಡೆಯುತ್ತಿರುತ್ತವೆ. ಮುಂದಿನ ದಿನಗಳಲ್ಲಿ ಮುಸ್ಲಿಂರ ಜೊತೆಗೆ ವ್ಯಾಪಾರ ವಹಿವಾಟು ನಡೆಸಬಾರದು ಅನ್ನೋ ಬಹಿಷ್ಕಾರ ಮಾಡಲಾಗುತ್ತದೆ. ಅದು ಗೋಹತ್ಯೆ, ಗೋಮಾಂಸ ತಿನ್ನುವುದನ್ನ ನಿಲ್ಲಿಸುವವರೆಗೂ ಈ ಬಹಿಷ್ಕಾರ ಮುಂದುವರೆಯಲಿದೆ ಎಂದರು.

ಬೆಳಗ್ಗೆ ಐದು ಗಂಟೆಗೆ ಆಜಾನ್ ಕೂಗುವುದನ್ನ ನಿಲ್ಲಿಸಬೇಕು. ಇಡೀ ರಾಜ್ಯಾದ್ಯಂತ ಆರ್ಥಿಕ ಬಹಿಷ್ಕಾರ ಹಾಕಲು ಶ್ರೀರಾಮ ಸೇನೆ ಆಂದೋಲನವಾಗಿದೆ. ಆಕ್ಷನ್‍ಗೆ ರಿಯಾಕ್ಷನ್ ನಾವು ಕೊಡುತ್ತಿದ್ದೇವೆ. ಬಹುಸಂಖ್ಯಾತ ಹಿಂದೂ ಸಮಾಜದ ಗೌರವ ಕಾಣುವ ಪ್ರಕ್ರಿಯೆ ಆಗಬೇಕು. ನಮ್ಮ ದೇವರನ್ನು ಒಪ್ಪದ ನೀವು ನಮ್ಮ ಜಾತ್ರೆಯಲ್ಲಿ ಯಾಕೆ ಬರುತ್ತೀರಿ. 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ