Breaking News

ಇವಿಎಂ ಸ್ಟ್ರಾಂಗ್ ರೂಮ್ ಕಾಯಲು ಎಸ್ ಪಿ ಕಾರ್ಯಕರ್ತರ ಮೂರು ಪಾಳಿಗಳ ಕೆಲಸ !

Spread the love

ಲಕ್ನೋ : ದೇಶದ ಅತೀ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಮತದಾನ ಮುಕ್ತಾಯವಾಗಿ ಹಲವು ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳಲಾಗಿದೆಯಾದರೂ ಸಮಾಜವಾದಿ ಪಕ್ಷ ಇನ್ನೂ ಅಧಿಕಾರಕ್ಕೆ ನಾವೇ ಬರುತ್ತೇವೆ ಎಂದು ಹೇಳುವುದನ್ನು ನಿಲ್ಲಿಸಿಲ್ಲ.

ಹಸ್ತಿನಾಪುರದ ಎಸ್‌ಪಿ ಅಭ್ಯರ್ಥಿ ಯೋಗೇಶ್ ವರ್ಮಾ ಮಾತನಾಡಿ, ‘ಇವಿಎಂ ಸ್ಟ್ರಾಂಗ್ ರೂಮ್ ಮತ್ತು ಅದರ ಸುತ್ತಲಿನ ಇತರ ಚಲನವಲನಗಳ ಮೇಲೆ ನಿಗಾ ಇಡಲು ಎಸ್‌ಪಿ ಮುಖ್ಯಸ್ಥರು ನಮಗೆ ಆದೇಶಿಸಿದ್ದಾರೆ. ನಾವು 8 ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಮತ್ತೆ ಚುನಾವಣಾ ಅಧಿಕಾರಿಗಳ ಕುರಿತಾಗಿ ಸಂಶಯ ಹೊರ ಹಾಕಿದ್ದಾರೆ.

ನಮಗೆ ಎಕ್ಸಿಟ್ ಪೋಲ್‌ಗಳಲ್ಲಿ ನಂಬಿಕೆ ಇಲ್ಲ, ಅಖಿಲೇಶ್ ಯಾದವ್ ಸಿಎಂ ಆಗುತ್ತಾರೆ. ನಾವು ಸರ್ಕಾರ ರಚಿಸುತ್ತೇವೆ. ಬಹುಮತ ಬರುವುದು ನಮಗೆ ಎಂದು ವರ್ಮಾ ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ