Breaking News

ಉಕ್ರೇನ್‌ ಅಧ್ಯಕ್ಷರನ್ನು ಕೊಲ್ಲಲು ಬಂದಿದ್ದವರ ಹತ್ಯೆ

Spread the love

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರನ್ನು ಕೊಲ್ಲಲು ಆಗಮಿಸಿದ್ದ ಚೆಚೆನ್ಯಾ ಮೂಲದ ಹಂತಕರ ಗುಂಪೊಂದನ್ನು ಸಂಪೂರ್ಣವಾಗಿ ನಾಶ ಮಾಡಿರುವುದಾಗಿ ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣ ಕೌನ್ಸಿಲ್‌ನ ಮುಖ್ಯಸ್ಥರಾದ ಒಲೆಕ್ಸಿಯ್‌ ಡ್ಯನಿಲೊವ್‌ ತಿಳಿಸಿದ್ದಾರೆ.

ಉಕ್ರೇನ್‌ನ ರಾಷ್ಟ್ರೀಯ ಟೆಲಿವಿಶನ್‌ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ರಷ್ಯಾ ಗುಪ್ತಚರ ಇಲಾಖೆಯಲ್ಲಿರುವ, ಯುದ್ಧ ಮಾಡುವ ಮನಸ್ಸಿಲ್ಲದ ಅಧಿಕಾರಿಗಳು ಉಕ್ರೇನ್‌ನ ಅಧಿಕಾರಿಗಳಿಗೆ ಚೆಚೆನ್ಯಾದಿಂದ ಬಂದಿದ್ದ ಈ ಹಂತಕರ ಗುಂಪಿನ ಬಗ್ಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿಯನ್ನಾಧರಿಸಿ ಹಂತಕರ ಗುಂಪನ್ನು ನಾಶಗೈದಿರುವುದಾಗಿ ಒಲೆಕ್ಸಿಯ್‌ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ