ಶಿವಮೊಗ್ಗ : ಭದ್ರಾವತಿಗೂ, ಕೆ.ಆರ್. ಪೇಟೆಗೂ, ಮಂಡ್ಯ ಜಿಲ್ಲೆಗೂ ಅವಿನಾಭಾವ ಸಂಬಂಧ ಇದೆ. ಇವತ್ತು ಭದ್ರಾವತಿಯ ಜೆಡಿಎಸ್, ಕಾಂಗ್ರೆಸ್ ಹಲವು ಮುಖಂಡರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇದು ಅವರು ಮಾಡಿರುವ ಒಳ್ಳೆಯ ತೀರ್ಮಾನ ಎಂದು ರೇಷ್ಮೆ ಮತ್ತು ಯುವಜನ ಸೇವಾ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜೆಡಿಎಸ್ ಬಗ್ಗೆ ಮಾತೇ ಆಡಲ್ಲ. ಭದ್ರಾವತಿಯಲ್ಲಿ ಕಮಲ ಅರಳಿಸೋಣ, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದುಡಿಯೋಣ ಎಂದರು.
Laxmi News 24×7