Breaking News

ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್, ಈಗ ಇರೋದ್ ನಕಲಿ ಕಾಂಗ್ರೆಸ್: ಆರ್.ಅಶೋಕ್

Spread the love

ಬೆಂಗಳೂರು: ಕೋಳಿನಾ ಕೇಳಿ ಖಾರ ಅರಿಯೋ ಅಭ್ಯಾಸ ಬಿಜೆಪಿಗಿಲ್ಲ. ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್. ಈಗ ಇರೋದ್ ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್​​ಗೂ ಈಗಿರುವ ಕಾಂಗ್ರೆಸ್​ಗೂ ಸಂಬಂಧವಿಲ್ಲ ಎಂದು ಆರ್.ಅಶೋಕ್ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಜಾ ಮಾಡುವುದಾದ್ರೆ ಕಾಂಗ್ರೆಸ್​​ನವರನ್ನು ವಜಾ ಮಾಡಬೇಕು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಬಾವುಟ ಹಾರಿಸಿ ಎಂದಾಗ ಎಲ್ಲಿದ್ದರು ಇವರು?, ಇದು ಕಾಂಗ್ರೆಸ್​​ನವರ ರಾಜಕೀಯ ದೊಂಬರಾಟ ಅಷ್ಟೇ. ಆರಾಮಾಗಿ ಧರಣಿ ಮಾಡಲಿ. ಮೋದಿ ಬಂದ ಮೇಲೆ ಇವರು ಎಲ್ಲಾ ಕಡೆ ನಿದ್ದೆ ಮಾಡ್ತಿದ್ದಾರೆ. ಎಲ್ಲಾ ಕಡೆ ಕಾಂಗ್ರೆಸ್ ಖಾಲಿ ಆಗ್ತಿದೆ. ಬಿಜೆಪಿ ಇಲ್ಲ ಅಂದಿದ್ರೆ ಕಾಂಗ್ರೆಸ್​​ಗೆ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ಇವರಿಗೆ ಇಟಲಿ ಮೇಲೆ ತುಂಬಾ ಆಸೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರ ಮಾತನಾಡಿ, ಸದನದಲ್ಲಿ ಆರಾಮಗಿ ನಿದ್ದೆ ಮಾಡ್ಲಿ. ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್​​ನವರಿಗೆ ನೈತಿಕತೆ ಇಲ್ಲ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ‌ರಾಷ್ಟ್ರಧ್ವಜ ಹಾರಿಸಿದ್ದೇವೆ. ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲಾ ನಾಟಕ,‌ ಶೋ ಅಂತಾ ಕುಮಾರಸ್ವಾಮಿಯೇ ಹೇಳಿದ್ದಾರೆ. ನಿನ್ನೆಯ ಸದನದಲ್ಲಿ ನಡೆದ ವರ್ತನೆ ಕಾಂಗ್ರೆಸ್​​ನ ಗೂಂಡಾಗಿರಿ ಎಂದು ಕಿಡಿಕಾರಿದರು.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ