Breaking News

ಜೀವಂತವಾಗಿ ವಾಪಾಸ್‌ ಬಂದಿದ್ದೇನೆ, ನಿಮ್ಮ ಸಿಎಂಗೆ ನನ್ನ ಧನ್ಯವಾದ ತಿಳಿಸಿಬಿಡಿ : ಅಧಿಕಾರಿಗಳ ಬಳಿ ʼಪ್ರಧಾನಿ ಮೋದಿʼ ಅಸಮಾಧಾನ

Spread the love

ಚಂಡೀಗಢ: ಪ್ರಧಾನ ಮಂತ್ರಿಗಳ ಭದ್ರತೆಯಲ್ಲಿ ದೊಡ್ಡ ಲೋಪ ಉಂಟಾದ ಹಿನ್ನೆಲೆಯಲ್ಲಿ ಪಂಚಾಬ್‌ನ ಫಿರೋಜ್ ಪುರ(Ferozepur)ದಲ್ಲಿ ಬುಧವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ಮೊದಲ ರ್ಯಾಲಿ(first rally)ಯನ್ನ ರದ್ದುಗೊಳಿಸಲಾಗಿದ್ದು, ಪ್ರಧಾನಿ ನವದೆಹಲಿಗೆ ವಾಪಸ್‌ ಆಗಿದ್ದಾರೆ.

 

ಇನ್ನು ದೆಹಲಿಗೆ ವಾಪಸಾಗುವಾಗ ಭಟಿಂಡಾ ಸೆಕ್ಯೂರಿಟಿ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿ, ‘ಏರ್‌ಪೋರ್ಟ್‌ವರೆಗೆ ಜೀವಂತವಾಗಿ ವಾಪಸ್‌ ಬಂದಿದ್ದೇನೆ. ನಿಮ್ಮ ಸಿಎಂಗೆ ನನ್ನ ಧನ್ಯವಾದ ತಿಳಿಸಿಬಿಡಿ’ ಎಂದಿದ್ದಾರೆ ಎನ್ನಲಾಗ್ತಿದೆ.

ಈ ನಡುವೆ ಭದ್ರತಾ ಲೋಪದ ಕುರಿತು ಮಾತನಾಡಲು ಪಂಜಾಪ್‌ ಮುಖ್ಯಮಂತ್ರಿಗಳಿಗೆ ಫೋನ್‌ ಮಾಡಿದ್ರೆ, ಕರೆಯನ್ನೇ ಸ್ವೀಕರಿಸುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ