Breaking News

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್ಕುಮಾರ್ ಭಾವಚಿತ್ರ: KMF ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

Spread the love

ಬೆಂಗಳೂರು : ಕನ್ನಡ ಚಿತ್ರರಂಗದ ರಾಜರತ್ನ ಹಾಗೂ ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಆದರೆ, ಅವರಿಗೆ ಇದ್ದ ಪರಿಸರ ಕಾಳಜಿ, ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ.

ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.

ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್​ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ತೋರಿಸಲಾಗಿದೆ. ಇನ್ನು ಡಾ. ರಾಜ್ ಕುಮಾರ್ ಕೂಡ ಸಾಮಾಜಿಕ ಕಳಕಳಿಯನ್ನ ಹೊಂದಿದ್ದ ಮೇರು ನಟನಾಗಿದ್ದರು. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಮಾತಿಗೆ ತಕ್ಕಂತೆ ನಡೆದುಕೊಂಡವರು ಅಣ್ಣಾವ್ರು. ಅಂದು ನಂದಿನಿ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್​ಕುಮಾರ್,

ಯಾವುದೇ ಸಂಭಾವನೆ ತೆಗೆದುಕೊಳ್ಳದೆ ರೈತರ ಪರ ನಿಂತಿದ್ದರು. ತಂದೆಯ ಆದರ್ಶಗಳನ್ನ ಪಾಲಿಸಿಕೊಂಡ ಪುನೀತ್ ರಾಜ್​ಕುಮಾರ್ ಕೂಡ ಒಂದು ರೂಪಾಯಿ ಸಂಭಾವನೆ ಪಡೆಯದೆ ಕೆಎಂಎಫ್​ ನಂದಿನಿ ಹಾಲಿನ ರಾಯಭಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ಪ್ಯಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಭಾವಚಿತ್ರವನ್ನ ಪ್ರಿಂಟ್ ಮಾಡಿ ವಿಶೇಷ ಗೌರವ ಸೂಚಿಸಲಾಗಿದೆ. ವರ್ಷದ ಕೊನೆಯ ದಿನವಾದ ಇಂದು ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಭಾವಚಿತ್ರವನ್ನ ಮುದ್ರಿಸಿದ್ದಾರೆ. ಹೀಗಾಗಿ, ಕೋಟ್ಯಂತರ ಅಭಿಮಾನಿಗಳಿಗೆ ಸಂತೋಷವಾಗಿದೆ.


Spread the love

About Laxminews 24x7

Check Also

ಉಪಚುನಾವಣೆಯಲ್ಲಿ ಮೇಟಿ ಕುಟುಂಬದವರಿಗೆ ಟಿಕೆಟ್

Spread the loveಬೆಳಗಾವಿ: ‘ಕಾಂಗ್ರೆಸ್ ಶಾಸಕ ಎಚ್‌.ವೈ. ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ