ಉತ್ತರಪ್ರದೇಶ : ಮಹಿಳೆಯೊಬ್ಬಳಿಗೆ ಆಕೆಯ ಗಂಡನನ್ನ ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ವಕೀಲ ಹಾಗೂ ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಅಪರಾಧಗಳ ಆಗರ ಉತ್ತರ ಪ್ರದೇಶದಲ್ಲಿ ನಡೆದಿದೆ..
ಮಹೇಶ್ , ವಿಕಾಸ್ ಹಾಗೂ ದೇವೇಂದ್ರ ಎಂಬಾತ ಸೇರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.. ಈ ಬಗ್ಗೆ ಮಹಿಳೆಯು, ವಕೀಲರು ಸಹಾಯ ಮಾಡುವ ನೆಪದಲ್ಲಿ ನನ್ನನ್ನು ನೋಯ್ಡಾದಲ್ಲಿರುವ ಕಚೇರಿಗೆ ಕರೆಸಿಕೊಂಡು ಅಲ್ಲಿ ಅವನು ಮತ್ತು ಅವನ ಸಹಚರರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಈ ವಿಚಾರವನ್ನು ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ಬೆದರಿಸಿದ್ದು ಅಲ್ಲದೇ ವೀಡಿಯೋ ಕೂಡ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಜೈಲಿಗೆ ಹಾಕಲಾಗಿತ್ತು.. ಈ ಹಿನ್ನೆಲೆಯಲ್ಲಿ ಪತಿಗೆ ಜಾಮೀಜು ಕೊಡಿಸಲು ವಕೀಲನ ಬಳಿ ಮಹಿಳೆ ಕಾನೂನು ಸಹಾಯದ ನಿರೀಕ್ಷೆಯಲ್ಲಿದ್ದರು..
ಹರಿಯಾಣದ ಬಲ್ಲಭಗಢ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ, ತನ್ನ ಪತಿ ಜೈಲಿನಲ್ಲಿದ್ದಾಗ ಜಾಮೀನು ಪಡೆಯಲು ವಕೀಲರನ್ನು ಹುಡುಕುತ್ತಿದ್ದೆ. ಈ ವೇಳೆ ವಿಕಾಸ್ ಎಂಬಾತನಿಂದ ಕರೆ ಬಂದಿದ್ದು, ತನ್ನ ಪತಿಗೆ ಜಾಮೀನು ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ನಂತರ ವಕೀಲ ಮಹೇಶ್ ಅವರನ್ನು ಭೇಟಿಯಾಗುವಂತೆ ಹೇಳಿದ್ದ. ಆನಂತರ ನಾನು ಅಲ್ಲಿಗೆ ಹೋದಾಗ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..