Breaking News

ಇದ್ಯಾವ ಅಭಿವೃದ್ಧಿ, ಇದಾ ನಿಮ್ಮ ನೀತಿ’ ಎಂದು ರಾಜ್ಯ ಸರ್ಕಾರದ ವಿರುದ್ಧವೇ ಬಿಜೆಪಿ ಸದಸ್ಯ ಸಿದ್ದು ಸವದಿ ವಿಧಾನಸಭೆಯಲ್ಲಿ ಕಿಡಿ

Spread the love

ಬೆಳಗಾವಿ (ಸುವರ್ಣ ವಿಧಾನಸೌಧ): ‘ಇದ್ಯಾವ ಅಭಿವೃದ್ಧಿ, ಇದಾ ನಿಮ್ಮ ನೀತಿ’ ಎಂದು ರಾಜ್ಯ ಸರ್ಕಾರದ ವಿರುದ್ಧವೇ ಬಿಜೆಪಿ ಸದಸ್ಯ ಸಿದ್ದು ಸವದಿ ವಿಧಾನಸಭೆಯಲ್ಲಿ ಗುರುವಾರ ಹರಿಹಾಯ್ದರು.

ಬನಹಟ್ಟಿಯ ಹಳೆಯಲ್ಲಮ್ಮ ದೇವಸ್ಥಾನಕ್ಕೆ ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಅವಧಿಯಲ್ಲಿ ಸಿದ್ದು ಸವದಿ ಪ್ರಶ್ನೆ ಕೇಳಿದರು.’₹20 ಲಕ್ಷ ಮೊತ್ತದ ಕಾಮಗಾರಿ ಆರಂಭವಾಗಿ ಮೂರು ವರ್ಷವಾಗಿದ್ದು, ಕಾಮಗಾರಿ ಮುಗಿಸಲು ವಿಳಂಬ ಮಾಡಲಾಗುತ್ತಿದೆ.

ಇದಾ ಅಭಿವೃದ್ಧಿ ನೀತಿ’ ಎಂದೂ ಪ್ರಶ್ನಿಸಿದರು. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ಯೋಜನೆಯ ಸ್ವರೂಪ ಬದಲಿಸಿ ಎಂದು ಸಿದ್ದು ಸವದಿ ಅವರೇ ಪತ್ರ ನೀಡಿದ ಕಾರಣಕ್ಕೆ ಸ್ವರೂಪ ಬದಲಿಸಲಾಗಿದೆ. ಹಾಗಾಗಿ, ಸ್ವಲ್ಪ ವಿಳಂಬವಾಗಿದೆ’ ಎಂದರು.

ನೀವೇ ಪತ್ರ ನೀಡಿದ್ದೀರಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ‘ನಾನು ಪತ್ರ ಕೊಟ್ಟಿಲ್ಲ. ಅಧಿಕಾರಿಗಳೇ ನನ್ನಿಂದ ಪತ್ರ ಬರೆಸಿಕೊಂಡರು’ ಎಂದು ಸಿದ್ದು ಸವದಿ ಸಮಜಾಯಿಷಿ ನೀಡಿದರು. ಅದು ನೀವು ಪತ್ರ ಕೊಟ್ಟಂತೆಯೇ ಎಂದು ಕಾಗೇರಿ ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ