Breaking News

ಬೆಳ್ಳುಳ್ಳಿ ದರದಲ್ಲಿ ದಿಢೀರ್​ ಕುಸಿತ ಕಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ

Spread the love

ಹಾವೇರಿ: ಬೆಳ್ಳುಳ್ಳಿ ದರದಲ್ಲಿ ದಿಢೀರ್​ ಕುಸಿತ ಕಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಭಾನುವಾರ ಕುಸಿದಿದೆ. ಕೆಲ ದಿನಗಳ ಹಿಂದೆ 1 ಕ್ವಿಂಟಲ್​ ಬೆಳ್ಳುಳ್ಳಿ ದರ 4 ಸಾವಿರದಿಂದ 10 ಸಾವಿರ ರೂಪಾಯಿ ಇತ್ತು.

ಭಾನುವಾರ 1 ಕ್ವಿಂಟಲ್​ ಬೆಳ್ಳುಳ್ಳಿ ಒಂದೂವರೆ ಸಾವಿರದಿಂದ 4 ಸಾವಿರ ರೂಪಾಯಿಗೆ ಮಾರಾಟ ಆಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ.

ಧಾರಾಕಾರವಾಗಿ ಸುರಿದ ಮಳೆ, ಮೋಡಮುಸುಕಿದ ವಾತಾವರಣ ಇರುವ ಕಾರಣ ಬೆಳ್ಳುಳ್ಳಿಯನ್ನು ಒಣಗಿಸಲು ಆಗುತ್ತಿಲ್ಲ. ಪರಿಣಾಮ ಮನೆಯಲ್ಲಿ ದಾಸ್ತಾನು ಇಟ್ಟಿದ್ದ ಬೆಳ್ಳುಳ್ಳಿಯನ್ನೂ ರೈತರು ಮಾರಾಟಕ್ಕೆ ತಂದಿದ್ದರು. ಮಾರುಕಟ್ಟೆಗೆ ಭರಪೂರ ಬೆಳ್ಳುಳ್ಳಿ ಬಂದಿದ್ದರೂ ಖರೀದಿದಾರರ ಸಂಖ್ಯೆ ಮಾತ್ರ ಕಡಿಮೆ ಇತ್ತು. ಉತ್ತಮ ದರ ಸಿಗುತ್ತೆ ಎಂದು ಮಾರುಕಟ್ಟೆಗೆ ಬೆಳ್ಳುಳ್ಳಿ ತಂದಿದ್ದ ರೈತರು ದರ ನೋಡಿ ಕಂಗಾಲಾದರು. ಖರ್ಚು-ವೆಚ್ಚವೂ ಬರಲಿಲ್ಲ ಎಂದು ಕಣ್ಣೀರಿಟ್ಟರು.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ