Breaking News

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮೂವರಲ್ಲಿ ಎಲೆಕ್ಷನ್ ನಾವು ಗೆಲ್ಲಬೇಕು.. : ಲಕ್ಷ್ಮೀ ಹೆಬ್ಬಾಳ್ಕರ್

Spread the love

ಪರಿಷತ್ ಚುನಾವಣಾ ಫೈಟ್‌ನಲ್ಲಿ ರಾಜಕೀಯ ಬದ್ಧವೈರಿಗಳ ವಾಗ್ಯುದ್ಧ ಜೋರಾಗಿಯೇ ನಡೆದಿದ್ದು,ರಮೇಶ್ ಜಾರಕಿಹೊಳಿಗೆ ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಂಡುಕೋರ ಎಂದಿದ್ದಾರೆ.

ರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮೂವರಲ್ಲಿ ಎಲೆಕ್ಷನ್ ನಾವು ಗೆಲ್ಲಬೇಕು..ನಾವು ಗೆಲ್ಲಬೇಕು ಅಂತಾ ಓಡಾಡ್ತಿದ್ದೀವಿ..ಆದ್ರೆ,ಒಬ್ಬರು ಬಿಜೆಪಿಯಿಂದ ಓಡಾಡ್ತಿದ್ರೆ.ನಾವು ಕಾಂಗ್ರೆಸ್‌ನಿಂದ ಓಡಾಡ್ತಿದೀವಿ. ಒಬ್ಬರು ಪಕ್ಷೇತರವಾಗಿ ಓಡಾಡುತ್ತಿದ್ದಾರೆ.ಅವರು ಮುಂಚೆ ನಮ್ಮ ಪಕ್ಷದಲ್ಲಿ ಇದ್ರು. ಇಲ್ಲಿಯೂ ಬಂಡುಕೋರ ಮಾಡಿದ್ರು.ಇಲ್ಲಿಯೂ ಕೂಡ ಅವರಿಗೆ ಸಮಾಧಾನ ಆಗಲಿಲ್ಲ.ಈಗ ಬಿಜೆಪಿಗೆ ಹೋಗಿದ್ದು ಬಿಜೆಪಿಯಲ್ಲೂ ಬಂಡುಕೋರ ಮಾಡ್ತಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿ ಪಕ್ಷದಲ್ಲಿ ಬಾಯಿ ತೆಗೆದ್ರೆ ರಾಮ ರಾಮ ಅಂತಾ ಹೇಳ್ತಾರೆ.ಒಬ್ಬ ಮಹಿಳಾ ಶಾಸಕಿ ಬಗ್ಗೆ ಮಾತನಾಡಿದ್ದಾರೆ.ನನಗೆ ಅದರ ಬಗ್ಗೆ ಕಮೆಂಟ್ ಮಾಡುವಷ್ಟು ಟೈಮ್ ಇಲ್ಲ. ತಲೆನೂ ಓಡಲ್ಲ.ನನಗೆ ನನ್ನ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕೆನ್ನೋದು ಒಂದೇ ಗುರಿ ಇದೆ. ಅರ್ಜುನನ ಗುರಿ ಎಲ್ಲಿತ್ರಂದ್ರೆ ಪಾರಿವಾಳ ಕಣ್ಣಿಗೆ ಇತ್ತು ಅನ್ನೋ ಹಾಗೇ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸೋದು ಒಂದೇ ಗುರಿ ಇದೆ.ನಾನು ತಲೆಕೆಡಿಸಿಕೊಂಡಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ.ಒಬ್ಬಳು ಶಾಸಕಿಗೆ ಕಿಮ್ಮತ್ತು ನೀಡದವರು ಮಹಿಳೆಗೆ ಕೊಡ್ತಾರಾ?.. ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ