ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯಲು ಘೋಷಿಸಿದ್ದ 21 ದಿನಗಳ ಲಾಕ್‍ಡೌನ್ ಅವಧಿಯ ಕೊನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಮತ್ತೊಂದು ಚಾಲೆಂಜ್ ನೀಡಿದ್ದಾರೆ. ಮೇ.3ರ ವರಗೆ ಲಾಕ್‍ಡೌನ್ ವಿಸ್ತರಣೆ ಘೋಷಿಸಿರುವ ಪ್ರಧಾನಿ ಕೊರೋನಾ ವಿರುದ್ಧ ಹೋರಾಟವನ್ನು ಮುಂದುವರೆಸಲು ಮನವಿ ಮಾಡಿದ್ದಾರೆ.
ಇಂದು ಸರಿಯಾಗಿ 10 ಗಂಟೆಗೆ ಭಾಷಣ ಆರಂಭಸಿದ ಪ್ರಧಾನಿ ನರೇಂದ್ರ ಮೋದಿ , ಬಾಬಾ ಸಾಹೇಬ್ ಡಾಕ್ಟರ್ ಬೀಮ್ ರಾವ್ ಅಂಬೇಡ್ಕರ್ ಅವರ ಜಯಂತಿ ದಿನವಾದ ಇಂದು, ನಾವು ಭಾರತದ ಎಲ್ಲ ದೇಶವಾಸಿಗಳು ನಮ್ಮ ಸಾಮೂಹಿಕ ಶಕ್ತಿ ಪ್ರದರ್ಶನ, ಸಂಕಲ್ಪ ಸಾಧಿಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದೇವೆ ಎಂದು ಅಂಬೇಡ್ಕರ್ ಅವರನ್ನು ನೆನೆದು ಭಾಷಾನ ಆರಂಬ್ಸಿಐದಾರು.
Laxmi News 24×7