Breaking News

ಸಿಎಂ ಬಿಎಸ್ ವೈ ಭೇಟಿಯಾಗಿ ‘ಬೆಲ್ಲದ’ ವಿಚಾರ ತಿಳಿಸಿದ ಬೊಮ್ಮಾಯಿ: ಕಾವೇರಿಗೆ ಶಾಸಕರ ದೌಡು

Spread the love

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿದೆ. ಸಿಎಂ ನಿವಾಸ ಕಾವೇರಿಗೆ ಶಾಸಕರು ದೌಡಾಯಿಸುತ್ತಿದ್ದು, ಕಾವೇರಿ ನಿವಾಸದಲ್ಲಿ ಚರ್ಚೆ ಕಾವೇರಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಶಾಸಕ ಅರವಿಂದ್ ಬೆಲ್ಲದ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ಅರವಿಂದ್ ಬೆಲ್ಲದ್ ಕರೆಸಿಕೊಂಡು, ದೆಹಲಿಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದರು. ಈ ಮಾಹಿತಿಯನ್ನು ಸಿಎಂ ಗೆ ತಿಳಿಸಲು ಬೊಮ್ಮಾಯಿ ಇಂದು ಕಾವೇರಿ ನಿವಾಸಕ್ಕೆ ಆಗಮಿಸಿದ್ದಾರೆ.

ಸಚಿವರು ಶಾಸಕರ ದೌಡು: ಅರುಣ್ ಸಿಂಗ್ ಆಗಮನದ ಹಿನ್ನೆಲಯಲ್ಲಿ ಸಿಎಂ ನಿವಾಸಕ್ಕೆ ಸಚಿವರು, ಶಾಸಕರು ಭೇಟಿ ನೀಡುತ್ತಿದ್ದಾರೆ. ಶಾಸಕ ರಾಜುಗೌಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಸಿಎಂ ಬಿಎಸ್ ವೈ ಅವರನ್ನು ಭೇಟಿ ಮಾಡಿದ್ದಾರೆ. ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌವ್ಹಾಣ, ಸಿಸಿ ಪಾಟೀಲ್ ಕೂಡ ಆಗಮಿಸಿದ್ದಾರೆ. ಇವರೊಂದಿಗೆ ಮಹೇಶ್ ಕುಮಟಳ್ಳಿ, ರವಿ ಸುಬ್ರಹ್ಮಣ್ಯ ಕೂಡ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಸಿಎಂ ಜೊತೆ ಚರ್ಚೆ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಐಪಿಎಲ್‌ ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ – ದಾಖಲೆ ಬರೆದ ಜಿಯೋಸ್ಟಾರ್

Spread the loveಮುಂಬೈ: 2026ರ ಐಪಿಎಲ್ ಟೂರ್ನಿ ಪ್ಲೇ ಆಫ್ ಹಂತ ತಲುಪುತ್ತಿದ್ದು, ತಂಡಗಳ ನಡುವಿನ ಹಣಾಹಣಿ ತೀವ್ರಗೊಂಡಿದೆ. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ