Breaking News
Home / ರಾಜ್ಯ / ಅಕ್ಕ ತಂಗಿಯನ್ನು ಮದುವೆ ಆಗಿದ್ದಾತನ ಮೇಲೆ ಪೋಲೀಸ್‌ ಮೊಕದ್ದಮೆ

ಅಕ್ಕ ತಂಗಿಯನ್ನು ಮದುವೆ ಆಗಿದ್ದಾತನ ಮೇಲೆ ಪೋಲೀಸ್‌ ಮೊಕದ್ದಮೆ

Spread the love

ಕೋಲಾರ, ; ಸುಪ್ರಿಯಾ ಮತ್ತು ಲಲಿತಾರನ್ನು ವಿವಾಹವಾಗಿದ್ದ ಕೋಲಾರದ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೇಗಮಡುಗು ಉಮಾಪತಿ ಸುಪ್ರಿಯಾ ಮತ್ತು ಲಲತಾರನ್ನು 7/5/2021ರಂದು ಒಂದೇ ಮುಹೂರ್ತದಲ್ಲಿ ವಿವಾಹವಾಗಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅಪ್ರಾಪ್ತ ಯುವತಿಯನ್ನು ವಿವಾಹವಾದ ಪ್ರಕರಣದಲ್ಲಿ ಮದುಮಗನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅನುಮಾನಗೊಂಡ ಕೋಲಾರ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು.ಮುಳಬಾಗಿಲು ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಖೆ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿದ್ದರು. ಈ ವೇಳೆ ಲಲಿತಾಗೆ ಇನ್ನೂ 16 ವರ್ಷ ಎಂಬುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ವಿವಾಹವಾ ಉಮಾಪತಿ, ತಾಯಿ, ತಂದೆ ಮತ್ತು ಹುಡುಗಿ ತಾಯಿ, ತಂದೆ ಸೇರಿದಂತೆ ಮದುವೆ ಮಾಡಿಸಿದ್ದ ಪೂಜಾರಿ ಹಾಗು ಲಗ್ನ ಪತ್ರಿಕೆ ಮುದ್ರಿಸಿದವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಮಾಪತಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅಕ್ಕನಿಗೆ ವಿವಾಹವಾಗದೇ ತಂಗಿ ಮದುವೆ ಆಗುವುದಿಲ್ಲ. ಅಕ್ಕನಿಗೆ ಎಲ್ಲಿ ಮದುವೆ ಆಗುವುದಿಲ್ಲವೋ ಎಂದು ಲಲಿತಾ ತನ್ನನ್ನು ಮದುವೆ ಆಗಬೇಕೆಂದರೆ ಸುಪ್ರಿಯಾಳನ್ನು ವಿವಾಹವಾಗಬೇಕು ಎಂದು ಷರತ್ತು ಹಾಕಿದ್ದಳು. ಪೋಷಕರು, ಗ್ರಾಮಸ್ಥರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಹಿರಿಯರ ಸಮ್ಮುಖದಲ್ಲಿಯೇ ಮೇ 7ರಂದು ಉಮಾಪತಿ ಇಬ್ಬರನ್ನೂ ವಿವಾಹವಾಗಿದ್ದರು.


Spread the love

About Laxminews 24x7

Check Also

ʻPSIʼ ನೇಮಕಾತಿ ವಿಚಾರ ಅಂತಿಮ ಹಂತದಲ್ಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾಹಿತಿ

Spread the love ಬೆಂಗಳೂರು : ಪಿಎಸ್‌ ಐ ನೇಮಕಾತಿ ವಿಚಾರ ಅಂತಿಮ ಹಂತದಲ್ಲಿದ್ದು, ಈ ವಾರ ಅಥವಾ ಮುಂದಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ