Breaking News

ಆಕ್ಸಿಜನ್ ಕೊಡಿಸಿ ಅಂದ್ರೆ ಸಿಎಂ ಹತ್ರ ಕೇಳಿ ಎಂದ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ

Spread the love

ತುಮಕೂರು: ಜಿಲ್ಲೆಯ ಅಶ್ವಿನಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾದ ಹಿನ್ನೆಲೆ ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮಂಜುನಾಥ್ ಎನ್ನುವವರು ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ಕರೆಮಾಡಿದಾಗ ಉಡಾಫೆ ಉತ್ತರ ಕೊಟ್ಟಿರುವ ಆಡಿಯೋ ವೈರಲ್ ಆಗಿದೆ.

ಆಕ್ಸಿಜನ್ ಇಲ್ಲ ಬೇರೆ ಕಡೆ ಡಿಸ್ಚಾರ್ಜ್ ಮಾಡಿಕೊಂಡು ಹೋಗಿ ಎಂದು ಆಸ್ಪತ್ರೆಯವರು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಮಾಧುಸ್ವಾಮಿಯವರಿಗೆ ಕರೆಮಾಡಿ ಆಕ್ಸಿಜನ್ ರಾತ್ರಿ 12 ಗಂಟೆವರೆಗೂ ಅಷ್ಟೇ ಅಂತಿದ್ದಾರೆ ನೀವು ಏನಾದರೂ ಮಾಡಿ ಅಂತಾ ಕೇಳಿಕೊಂಡಾಗ ಚೀಫ್ ಮಿನಿಸ್ಟರ್ ಹತ್ರ ಮಾತಾಡಿ ಎಂದು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ಇನ್ ಚಾರ್ಜ್ ಮಿನಿಸ್ಟರ್ ಆಗಿ ಏನಾದರೂ ಮಾಡಿ ಅಣ್ಣ ಅಂತಾ ಕೇಳಿಕೊಂಡರೂ ಉಡಾಫೆ ಉತ್ತರ ಕೊಟ್ಟು ಫೋನ್ ಕಾಲ್ ಕಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ