Breaking News

ಕಾಂಗ್ರೆಸ್​ನವರು ಬೆಲೆ ಏರಿಕೆಯನ್ನ ಇಶ್ಯೂ ಮಾಡುತ್ತಿದ್ದಾರೆ

Spread the love

ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವಕ್ಕೆ ಜನ ಬೆಂಬಲಿಸುತ್ತಿದ್ದಾರೆ ಯಾರೇ ಡಿಸ್ಟರ್ಬ್​ ಮಾಡಿದರೂ ಜನ ಡಿಸ್ಟರ್ಬ್​ ಆಗಲ್ಲ ಎಂದು ಸಚಿವ ಜಗದೀಶ್​ ಶೆಟ್ಟರ್​ ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್​ ಹಿನ್ನೆಲೆಯಲ್ಲಿ ಎಂಇಎಸ್​ ಅಭ್ಯರ್ಥಿ ಪರ ಶಿವಸೇನೆಯ ಸಂಜಯ್​ ರಾವುತ್​ ಪ್ರಚಾರ ವಿಚಾರವಾಗಿ ಮಾತನಾಡಿದ್ದಾರೆ. ಎಂಇಎಸ್​ಆಗಲಿ, ಬೇರೆ ಯಾರೇ ಏನೇ ಮಾಡಿದರೂ ಆ ಪ್ರಯತ್ನ ಫಲಿಸೋದಿಲ್ಲ. ಯಾಕೆಂದರೆ ಜನ ತುಂಬು ಹೃದಯದಿಂದ ಮೋದಿಯವರನ್ನ ಬೆಂಬಲಿಸುತ್ತಿದ್ದಾರೆ. ಇವತ್ತು ಅದೇ ಟ್ರೆಂಡ್​ಆಗಿದೆ, ಅದು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಇಡೀ ದೇಶದಲ್ಲಿ ಎಲ್ಲಾ ಸಮಾಜದವರಿಂದಲೂ ಮೋದಿ ನಾಯಕತ್ವಕ್ಕೆ ಬೆಂಬಲವಿದೆ. ಬಿಜೆಪಿ ಅಭ್ಯರ್ಥಿ ಗೆಲುವು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಲೆ ಏರಿಕೆ ಚುನಾವಣೆಯಲ್ಲಿ ಪರಿಣಾಮ ಬೀರಲ್ಲ, ನಾವು ಕ್ಯಾಂಪೇನ್‌ಗೆ ಹೋದಲ್ಲಿ ಯಾರೂ ಬೆಲೆ ಏರಿಕೆ ಪ್ರಶ್ನಿಸಿಲ್ಲ.

ಕಾಂಗ್ರೆಸ್​ನವರು ಬೆಲೆ ಏರಿಕೆಯನ್ನ ಇಶ್ಯೂ ಮಾಡುತ್ತಿದ್ದಾರೆ ಆದರೆ ಅದು ಯಾವುದೇ ಪರಿಣಾಮ ಬೀರಲ್ಲ. ಮೊದಲು ಏನು ಪ್ಲ್ಯಾನ್​ ಇತ್ತೋ ಆ ಪ್ರಕಾರವೇ ಮುಖ್ಯಮಂತ್ರಿಗಳು ಪ್ರಚಾರ ಮಾಡಲಿದ್ದಾರೆ. ಇಂದು ಸಿಎಂ ಚುನಾವಣಾ ಪ್ರಚಾರಕ್ಕೆ ಬರ್ತಾರೆ, ಮಧ್ಯಾಹ್ನ ಬಾಳೇಕುಂದ್ರಿ ಕೆ.ಹೆಚ್. ಗ್ರಾಮದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ಮಾಡಿ ಆನಂತರ ಸಂಜೆ 4.30ಕ್ಕೆ ಅರಭಾವಿ ಕ್ಷೇತ್ರ ವ್ಯಾಪ್ತಿಯ ಮೂಡಲಗಿಯಲ್ಲಿ ಪ್ರಚಾರ ಸಭೆನಡೆಸುತ್ತಾರೆ. ಸಂಜೆ ಗೋಕಾಕ್‌ನಲ್ಲಿ ರೋಡ್​ ಶೋ ಮಾಡಿ ಬಳಿಕ ಚುನಾವಣಾ ಪ್ರಚಾರ ಮಾಡ್ತಾರೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಹೆಚ್ಚಿನ ಲೀಡ್​ ಬರುತ್ತದೆ, ನಿನ್ನೆ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಬಂದಿದ್ದೇನೆ. ಎಲ್ಲಾ ಕಡೆ ಕಾರ್ಯಕರ್ತರು ಪರಿಣಾಮಕಾರಿ ಕ್ಯಾಂಪೇನ್​ ಮಾಡಿದಾರೆ, ನಮ್ಮ ಕಾರ್ಯಕರ್ತರು ಮನೆಮನೆಗೆ ಹೋಗಿ ಕ್ಯಾಂಪೇನ್​ ಮಾಡಿದ್ದಾರೆ. ಗ್ರೌಂಡ್​ ಲೇವಲ್‌ನಲ್ಲಿ ನಮ್ಮ ಕೆಲಸ ಕಾರ್ಯಗಳು ಮುಂದುವರೆಯುತ್ತೀವೆ ಎಂದಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ