ಮಡಿಕೇರಿ: ಒಂದು ವರ್ಷದಿಂದ ಗಾಮೀಣ ಭಾಗಗಳಿಗೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿಗೆ ಕಾರಣವಾಗಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬಂದಿ ಕಳತ್ಮಾಡು ಗ್ರಾಮದ ಕಾಫಿ ತೋಟದಿಂದ ಸೆರೆ ಹಿಡಿದಿದ್ದಾರೆ.
35ರ ಹರೆಯದ ಗಂಡಾನೆಯ ಸೆರೆಗೆ 3 ದಿನ ಗಳಿಂದ ಕಾರ್ಯಾಚರಣೆ ನಡೆಸಿರುವ ಸಿಬಂದಿ ಬಲ್ಲೆ ಹಾಗೂ ಮತ್ತಿಗೋಡು ಆನೆ ಶಿಬಿರಗಳ 6 ಸಾಕಾನೆಗಳ ಸಹಕಾರ ಪಡೆದುಕೊಂಡಿದ್ದರು.
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿಗೆ ಒಳಪಟ್ಟ ಗೋಣಿಕೊಪ್ಪಲು ಬಳಿಯ ಕಳತ್ಮಾಡು ಹಾಗೂ ಅಮ್ಮತ್ತಿ ಗ್ರಾಮದಲ್ಲಿ ಪುಂಡಾನೆಯ ಹಾವಳಿ ಮಿತಿ ಮೀರಿತ್ತು. ಬೇಸತ್ತ ಗ್ರಾಮಸ್ಥರು ಕಾಡಾನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು. ಪಶುವೈದ್ಯ ಡಾ| ಮುಜೀಬ್ ಮಾರ್ಗದರ್ಶನದೊಂದಿಗೆ ಮಡಿಕೇರಿ, ವೀರಾಜಪೇಟೆ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸೆರೆ ಸಿಕ್ಕ ಕಾಡಾನೆಯನ್ನು ಕ್ರೇನ್ ಬಳಸಿ ಲಾರಿಗೆ ಏರಿಸಿ ಬಂಡೀಪುರ ಅರಣ್ಯಕ್ಕೆ ರವಾನಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
Laxmi News 24×7